ಕೃಷಿ ಉತ್ಪನ್ನ ಮಾರಾಟಕ್ಕೆ ಅಂಚೆ ನೆರವು

ನೀವು ಕೃಷಿಕರೇ? ಬತ್ತ, ಹತ್ತಿ ಅಥವಾ ಇನ್ನಿತರ ಉತ್ಪನ್ನಗಳನ್ನು ಬೆಳೆಯುತ್ತೀರೇ? ಹಾಗಿದ್ದರೆ ಅವುಗಳನ್ನು ನೇರವಾಗಿ ಅಂಚೆ ಕಚೇರಿಗೆ ಒಯ್ಯಿರಿ!...
ಅಂಚೆ
ಅಂಚೆ

ಹೈದರಾಬಾದ್: ನೀವು ಕೃಷಿಕರೇ? ಬತ್ತ, ಹತ್ತಿ ಅಥವಾ ಇನ್ನಿತರ ಉತ್ಪನ್ನಗಳನ್ನು ಬೆಳೆಯುತ್ತೀರೇ? ಹಾಗಿದ್ದರೆ ಅವುಗಳನ್ನು ನೇರವಾಗಿ ಅಂಚೆ ಕಚೇರಿಗೆ ಒಯ್ಯಿರಿ!
ಏಕೆಂದು ಕೇಳುತ್ತೀರಾ? ಅಂಚೆ ಕಚೇರಿ ಯು ನಯಾ ಪೈಸೆ ಸಾಗಾಟ ವೆಚ್ಚವಿಲ್ಲದೇ ಇಂಟರ್ನೆಟ್ ಮೂಲಕ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿಕೊಡ ಲಿದೆ. ಹೌದು. ಇಂತಹುದೊಂದು ಯೋಜನೆ ಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲು ಅಂಚೆ ಇಲಾಖೆ ಮುಂದಾಗಿದೆ. ಅದರಂತೆ, ಪ್ರತಿ ಗ್ರಾಮಗಳಲ್ಲೂ ಒಬ್ಬ ಪೋಸ್ಟ್ ಮಾಸ್ಟರನ್ನು ನಿಯೋಜಿಸಲಾಗುತ್ತದೆ. ಆತ ರೈತರಿಂದ ಅವರ ಉತ್ಪನ್ನಗಳ ಮಾಹಿತಿ ಪಡೆದು, ಆ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್ ಲೋಡ್ ಮಾಡುತ್ತಾನೆ. ಇದನ್ನು ನೋಡುವ ವ್ಯಾಪಾರಿಗಳು ಉತ್ಪನ್ನಗಳನ್ನು ಖರೀದಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಇಲ್ಲಿ ಪೋಸ್ಟ್ ಮಾಸ್ಟರ್ ತಮ್ಮ ಸ್ಮಾರ್ಟ್ ಫೋ ನ್ ಮೂಲಕ ಉತ್ಪನ್ನಗಳ ಫೋಟೋ ತೆಗೆದು, ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡುತ್ತಾರೆ. ಈ ವೇದಿಕೆಯು ರೈತರಿಗೆ ಉಚಿತವಾಗಿದ್ದು, ಖರೀದಿದಾರರಿಗೆ ಅಲ್ಪ ಮೊತ್ತದ ಶುಲ್ಕ ವಿಧಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com