ಅಣ್ಣಾಮಲೈ, ತಮಿಳುನಾಡು ಮುಕ್ತ ವಿವಿ ಮಾನ್ಯತೆ ರದ್ದು

ಮಹತ್ವದ ಬೆಳವಣಿಗೆ ಯೆಂಬಂತೆ ತಮಿಳುನಾಡು ಮುಕ್ತ ವಿಶ್ವವಿದ್ಯಾಲಯ (ಟಿಎನ್ ಓಯು) ಮತ್ತು ಅಣ್ಣಾಮಲೈ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದು ಮಾಡಿ...
ವಿವಿ ಧನಸಹಾಯ ಆಯೋಗ
ವಿವಿ ಧನಸಹಾಯ ಆಯೋಗ

ಚೆನ್ನೈ: ಮಹತ್ವದ ಬೆಳವಣಿಗೆ ಯೆಂಬಂತೆ ತಮಿಳುನಾಡು ಮುಕ್ತ ವಿಶ್ವವಿದ್ಯಾಲಯ (ಟಿಎನ್ ಓಯು) ಮತ್ತು ಅಣ್ಣಾಮಲೈ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದು ಮಾಡಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಆದೇಶ ಹೊರಡಿಸಿದೆ. ಯುಜಿಸಿಯ ಆದೇಶದಿಂದಾಗಿ ಈ ವಿವಿಗಳಲ್ಲಿ ದೂರಶಿಕ್ಷಣ ಪಡೆಯುತ್ತಿದ್ದ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಕ್ತ ಹಾಗೂ ದೂರಶಿಕ್ಷಣ ಒದಗಿಸುವ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಎರಡು ವಿವಿ ಹೊರತುಪಡಿಸಿ, ಚೆನ್ನೈನಲ್ಲಿರುವ ಹಿಂದಿ ಪ್ರಚಾರ್ ಸಭಾ ಮತ್ತು ದೇಶಾದ್ಯಂತ ಇನ್ನಿತರ 28 ವಿಶ್ವವಿದ್ಯಾಲಯಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವೆ ಸ್ಮೃತಿಇರಾನಿ ಮಾಹಿತಿ ನೀಡಿದ್ದಾರೆ. ಆದರೆ, ಮೇಲಿನ ಎರಡೂ ವಿವಿಗಳ ಉಪಕುಲಪತಿಗಳು ಮಾತ್ರ, ಯುಜಿಸಿ ನಮಗೆ ಇಂತಹ ಯಾವುದೇ ಮಾಹಿತಿ ರವಾನಿಸಿಲ್ಲ. ಈ ವಿಚಾರದ ಬಗ್ಗೆ ನಮಗೆ ಗೊತ್ತೇ ಇಲ್ಲ ಎಂದಿದ್ದಾರೆ.

ರಾಜ್ಯದ 3 ವಿವಿಗಳ ದೂರಶಿಕ್ಷಣ ಮಾನ್ಯತೆ ರದ್ದು: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಬೆನ್ನಲ್ಲೇ ಈಗ ರಾಜ್ಯದ ಇನ್ನೂ ಮೂರು ವಿಶ್ವವಿದ್ಯಾಲಯಗಳ ದೂರಶಿಕ್ಷಣದ ಮಾನ್ಯತೆ ಯನ್ನು ಕೇಂದ್ರ ಧನಸಹಾಯ ಆಯೋಗ ರದ್ದು ಮಾಡಿದೆ. ಈ ಆದೇಶ ಈ ಶೈಕ್ಷಣಿಕ ಸಾಲಿನಿಂದಲೇ ಅನುಷ್ಠಾನಕ್ಕೆ ಬರಲಿದೆ.

ಯಾವ್ಯಾವ ವಿವಿ?: ಬೆಂಗಳೂರು ವಿವಿ, ಗುಲ್ಬರ್ಗ ವಿವಿ, ಧಾರವಾಡ ವಿವಿ. ಇದಲ್ಲದೆ ಬೆಂಗಳೂರಿನ ಭಾರತೀಯ ವಿದ್ಯಾಫೌಂಡೇಷನ್‍ನ ಹೆಸರೂ ಮಾನ್ಯತೆ ರದ್ದಾದ ವಿವಿಯ ಪಟ್ಟಿಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com