ಆಪ್ ಶಾಸಕಿ ಅಲ್ಕಾ ಲಾಂಬ ಮಾದಕ ವ್ಯಸನಿ: ಬಿಜೆಪಿ ಶಾಸಕ ಒ.ಪಿ ಶರ್ಮಾ

ಆಪ್ ಶಾಸಕಿ ವಿರುದ್ಧ ಎಫ್ಐಆರ್ ದಾಖಲಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿ ಶಾಸಕ ಒ.ಪಿ ಶರ್ಮಾ, ಅಲ್ಕಾ ಲಾಂಬ ಮಾದಕ ವ್ಯಸನಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಆಪ್ ಶಾಸಕಿ ಅಲ್ಕಾ ಲಾಂಬ
ಆಪ್ ಶಾಸಕಿ ಅಲ್ಕಾ ಲಾಂಬ

ನವದೆಹಲಿ: ಆಪ್ ಶಾಸಕಿ ಅಲ್ಕಾ ಲಾಂಬ ವಿರುದ್ಧ ಎಫ್ಐಆರ್ ದಾಖಲಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿ ಶಾಸಕ ಒ.ಪಿ ಶರ್ಮಾ, ಅಲ್ಕಾ ಲಾಂಬ ಮಾದಕ ವ್ಯಸನಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೇ ಸ್ವತಃ ಮಾದಕ ವ್ಯಸನಿಯಾಗಿರುವ ಅಲ್ಕಾ ಲಾಂಬ ಮಾದಕ ವ್ಯಸನ ವಿರೋಧಿ ಅಭಿಯಾನ ಕೈಗೊಂಡಿರುವುದನ್ನು ಶರ್ಮಾ ಪ್ರಶ್ನಿಸಿದ್ದಾರೆ.

ಚಾಂದನಿ ಚೌಕ್ ಶಾಸಕಿಯಾಗಿರುವ ಅಲ್ಕಾ ಲಾಂಬ ಮಾದಕ ದ್ರವ್ಯ ವಿರೋಧಿ ಆಂಧೋಲನ ನಡೆಸುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಸಿಹಿ ತಿನಿಸು ಮಾರಾಟ ಮಾಡುವ ಅಂಗಡಿಯಲ್ಲಿ ಅಕ್ರಮವಾಗಿ ಮಾದಕ ದ್ರವ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಂಗಡಿಗೆ ನುಗ್ಗಿದ್ದರು.  ಈ ವೇಳೆ ಆಮ್ ಆದ್ಮಿ ಪಕ್ಷದ ಶಾಸಕಿ ಅಲ್ಕಾ ಲಾಂಬ ಬೆಂಬಲಿಗರು ಅಂಗಡಿಯಲ್ಲಿ ದಾಂಧಲೆ ನಡೆಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅಲ್ಕಾ ಲಾಂಬಾ ವಿರುದ್ಧ ದೆಹಲಿ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

ಮತ್ತೊಮ್ಮೆ ಅಂಗಡಿಗಳ ಮೇಲೆ ದಾಳಿ ನಡೆಸಿದ ಪ್ರಕರಣ ಬೆಳಕಿಗೆ ಬಂದರೆ ಲಾಠಿ ಪ್ರಹಾರ ನಡೆಸಲಾಗುವುದು ಎಂದು ಬಿಜೆಪಿ ಶಾಸಕ ಶರ್ಮಾ ಎಚ್ಚರಿಕೆ ನೀಡಿದ್ದಾರೆ. " ನಾನು ಮಹಿಳಾ ವಿರೋಧಿ ಹೇಳಿಕೆ ನೀಡುತ್ತಿಲ್ಲ. ಆದರೆ ಅಂಗಡಿ ಮೇಲೆ ದಾಳಿ ನಡೆಸಿರುವ ಆಪ್ ಶಾಸಕಿ ಅಲ್ಕಾ ಲಾಂಬ ಮಾದಕ ವ್ಯಸನಿ ಎಂಬುದು ಸ್ಪಷ್ಟವಾಗಿದೆ. ಮಹಿಳೆಯರನ್ನು ಗೌರವಿಸುತ್ತೇನೆ. ಆದರೆ ಫೂಲನ್ ದೇವಿಯಂತವರನ್ನು ಮಹಿಳೆಯರ ಅಧಿಕಾರದ ಪ್ರತೀಕ ಎಂದು ಬಿಂಬಿಸಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಶರ್ಮಾ ತಿಳಿಸಿದ್ದಾರೆ. ದೆಹಲಿ ಜಂಗಲ್ ರಾಜ್ ಆಗಿದೆ ಎಂಬುದಕ್ಕೆ ಪ್ರತ್ಯೇಕ ಸಾಕ್ಷಿ ಬೇಕಿಲ್ಲ, ಅಂಗಡಿ ಮೇಲೆ ನಡೆದಿರುವ ದಾಳಿಯ ಸಿಸಿಟಿವಿ ದೃಶ್ಯಾವಳಿಗಳು ಸಾಕು ಎಂದು ಶರ್ಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com