ವಯಸ್ಕರ ಪೋರ್ನ್ ವೆಬ್ ಸೈಟ್ ನಿಷೇಧಿಸುವ ಉದ್ದೇಶವಿಲ್ಲ: ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ

ಮಕ್ಕಳ ಅಶ್ಲೀಲ ವಿಡಿಯೋಗಳ ವೆಬ್ ಸೈಟ್ ಗಳನ್ನು ಮಾತ್ರ ನಿಷೇಧಿಸಲಾಗಿದ್ದು, ವಯಸ್ಕರು ಖಾಸಗಿಯಾಗಿ ಪೋರ್ನ್ ವೀಕ್ಷಿಸುವುದನ್ನು ನಿಷೇಧಿಸುವ ಉದ್ದೇಶವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ
ಪೋರ್ನ್ ವೀಕ್ಷಣೆ (ಸಾಂಕೇತಿಕ ಚಿತ್ರ)
ಪೋರ್ನ್ ವೀಕ್ಷಣೆ (ಸಾಂಕೇತಿಕ ಚಿತ್ರ)

ನವದೆಹಲಿ: ಮಕ್ಕಳ ಅಶ್ಲೀಲ ವಿಡಿಯೋಗಳ ವೆಬ್ ಸೈಟ್ ಗಳನ್ನು ಮಾತ್ರ ನಿಷೇಧಿಸಲಾಗಿದ್ದು,  ವಯಸ್ಕರು ಖಾಸಗಿಯಾಗಿ ಪೋರ್ನ್ ವೀಕ್ಷಿಸುವುದನ್ನು ನಿಷೇಧಿಸುವ ಉದ್ದೇಶವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.

ಖಾಸಗಿಯಾಗಿ ಪೋರ್ನ್ ವೀಕ್ಷಿಸುವ ವ್ಯಕ್ತಿಯ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಬೆಂಬಲಿಸುತ್ತದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಹೆಚ್.ಎಲ್ ದತ್ತು ನೇತೃತ್ವದ ಪೀಠಕ್ಕೆ ಸ್ಪಷ್ಟನೆ ನೀಡಿದ್ದಾರೆ. ಪೋರ್ನ್ ವೆಬ್ ಸೈಟ್ ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ದೇಶನ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ವಯಸ್ಕರ ಪೋರ್ನ್ ವೆಬ್ ಸೈಟ್ ಗಳನ್ನು ನಿಷೇಧಿಸುವುದಿಲ್ಲ ಎಂದು ಹೇಳಿದೆ.

ಮಕ್ಕಳ ಅಶ್ಲೀಲ ವಿಡಿಯೋ ವೆಬ್ ಸೈಟ್ ಗಳನ್ನು ಮಾತ್ರ ನಿಷೇಧಿಸಲು ಸಾಧ್ಯ, ವಯಸ್ಕರ ಪೋರ್ನ್ ವೆಬ್ ಸೈಟ್ ಗಳನ್ನು ನಿಷೇಧಿಸುವುದು ವ್ಯಕ್ತಿಯ ಮನರಂಜನೆ  ಹಾಗೂ ವಾಕ್ ಸ್ವಾತಂತ್ರದ ಪ್ರಶ್ನೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ತನ್ನ ಮನೆಯಲ್ಲಿ ಏನನ್ನು ವೀಕ್ಷಿಸುತ್ತಿದ್ದಾನೆ ಎಂದು ಪ್ರತಿಯೊಬ್ಬ ವ್ಯಕ್ತಿಯನ್ನು ಪರಿಶೀಲನೆ ನಡೆಸಲು ಸಾಧ್ಯವಿಲ್ಲ ಎಂದು ರೋಹಟ್ಗಿ ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ 857 ಪೋರ್ನ್ ವೆಬ್ ಸೈಟ್ ಗಳನ್ನು ನಿಷೇಧಿಸಿದ್ದರಿಂದ ಪೋರ್ನ್ ಬ್ಯಾನ್ ಕುರಿತಾಗಿ ಅತಿ ಹೆಚ್ಚು ಚರ್ಚೆ ನಡೆದಿತ್ತು. ಅಲ್ಲದೇ ಮತ್ತಷ್ಟು ಅಶ್ಲೀಲ ವೆಬ್ ಸೈಟ್ ಗಳು ನಿಷೆಧಕ್ಕೊಳಗಾಗಲಿದೆ ಎಂಬ ನಿರೀಕ್ಷೆ ಇತ್ತು. ಕೆಲವರು ಬ್ಯಾನ್ ಮಾಡಿರುವುದನ್ನು ವಿರೋಧಿಸಿದ್ದರು. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ನೀಡಿರುವ ಹೇಳಿಕೆಯಿಂದ ಪೋರ್ನ್ ಬ್ಯಾನ್ ವಿರೋಧಿಸಿದ್ದವರಿಗೆ ಸ್ಪಷ್ಟನೆ ದೊರೆತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com