ಬಾಲಕಾರ್ಮಿಕ ಪದ್ಧತಿ ಜಾಮೀನು ರಹಿತ ಅಪರಾಧವಾಗಬೇಕು: ಕೈಲಾಶ್ ಸತ್ಯಾರ್ಥಿ

ಬಾಲಕಾರ್ಮಿಕ ಪದ್ಧತಿಯನ್ನು ಜಾಮೀನು ರಹಿತ ಅಪರಾಧವಾಗಬೇಕು ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಆಗ್ರಹಿಸಿದ್ದಾರೆ.
ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ
ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ

ಮಿರ್ಜಾಪುರ್: ಬಾಲಕಾರ್ಮಿಕ ಪದ್ಧತಿಯನ್ನು ಜಾಮೀನು ರಹಿತ ಅಪರಾಧವಾಗಬೇಕು ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಆಗ್ರಹಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಬಾಲಕಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಹಣಸಹಾಯ ಮಾಡಬೇಕು, ಮಕ್ಕಳು ಎದುರಿಸುತ್ತಿರುವ ಬಡತನ ಹಾಗೂ ಅನಕ್ಷರತೆಯ ವಿಷವರ್ತುಲಗಳನ್ನು ಇದರಿಂದಾಗಿ ನಾಶ ಮಾಡಬಹುದು ಎಂದು ಕೈಲಾಶ್ ಸತ್ಯಾರ್ಥಿ ಅಭಿಪ್ರಾಯಪಟ್ಟಿದ್ದಾರೆ.

ಬಡತನ ಹಾಗೂ ಅನಕ್ಷರತೆ ಎಂಬುದು ವಿಷವರ್ತುಲವಿದ್ದಂತೆ ಇದರಲ್ಲಿ ಯಾವುದು ಮೊದಲು ಎಂದು ಹೇಳಲು ಸಾಧ್ಯವಿಲ್ಲ. ಬಡತನ ಇದ್ದರೆ ಅನಕ್ಷರತೆ ಇರುತ್ತದೆ. ಇದರಿಂದಾಗಿ ಬಾಲಕಾರ್ಮಿಕ ಪದ್ಧತಿ ಬೆಳೆಯುತ್ತದೆ. ಅನಕ್ಷರತೆ ಇದ್ದರೆ ಬಡತನ ಹಾಗೂ ಅನಕ್ಷರತೆ ಎರಡೂ ಇರುತ್ತದೆ ಎಂದು ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ.

ಮಿರ್ಜಾಪುರ್ ನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸತ್ಯಾರ್ಥಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪ್ರಕಾರ ತಯಾರಾಗಿರುವ ಮಕ್ಕಳ ಹಕ್ಕುಗಳ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com