ದಾವೂದ್ ಮರುಳುವಿಕೆ ಬಗ್ಗೆ ಮಾಹಿತಿಯಿರಲಿಲ್ಲ: ಸುಶೀಲ್ ಕುಮಾರ್ ಶಿಂಧೆ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ಮರಳಿಬರುವ ಕುರಿತಂತೆ ಮೂಲಗಳಾಗಲೀ, ಸಂಸ್ಥೆಗಳಾಗಲಿ ಮಾಹಿತಿ ನೀಡಿರಲಿಲ್ಲ ಎಂದು ಮಾಜಿ ಗೃಹ ಸಚಿವ ಸುಶೀಲ್ ಕುಮರಾ ಶಿಂಧೆ ಅವರು ಮಂಗಳವಾರ ಹೇಳಿದ್ದಾರೆ...
ಮಾಜಿ ಗೃಹ ಸಚಿವ ಸುಶೀಲ್ ಕುಮರಾ ಶಿಂಧೆ
ಮಾಜಿ ಗೃಹ ಸಚಿವ ಸುಶೀಲ್ ಕುಮರಾ ಶಿಂಧೆ
Updated on

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ಮರಳಿಬರುವ ಕುರಿತಂತೆ ಮೂಲಗಳಾಗಲೀ, ಸಂಸ್ಥೆಗಳಾಗಲಿ ಮಾಹಿತಿ ನೀಡಿರಲಿಲ್ಲ ಎಂದು ಮಾಜಿ ಗೃಹ ಸಚಿವ ಸುಶೀಲ್ ಕುಮರಾ ಶಿಂಧೆ ಅವರು ಮಂಗಳವಾರ ಹೇಳಿದ್ದಾರೆ.

ದಾವೂದ್ ಭಾರತಕ್ಕೆ ಮರಳುವಿಕೆ ಯುಪಿಎ ಸರ್ಕಾರ ಚರ್ಚೆ ನಡೆಸಿತ್ತು ಎಂಬ ಆರೋಪದ ಕುರಿತಂತೆ ಮಾತನಾಡಿರುವ ಅವರು, ನಾನು ಗೃಹ ಸಚಿವನಾಗಿದ್ದಾಗ ಈ ರೀತಿಯ ಯಾವುದೇ ಮಾಹಿತಿ ನಮಗೆ ಸಿಕ್ಕಿರಲಿಲ್ಲ. ಯಾವುದೇ ಮಾಧ್ಯಮವಾಗಲಿ ಅಥವಾ ಸಂಸ್ಥೆಗಳಾಗಲಿ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ.

ಎರಡು ವರ್ಷದ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ದಾವೂದ್ ಇಬ್ರಾಹಿಂ ಭಾರತಕ್ಕೆ ವಾಪಸ್ ಆಗಲು ಸಿದ್ಧನಿದ್ದ. ಆತನ ಮರುಳುವಿಕೆ ಕುರಿತಂತೆ ಯುಪಿಎ ಸರ್ಕಾರ ಅಂದು ನಾಯಕರೊಂದಿಗೆ ಚರ್ಚೆ ನಡೆಸಿತ್ತು ಎಂದು ದೆಹಲಿ ಮೂಲದ ವಕೀಲ ಹಾಗೂ ಕಾಂಗ್ರೆಸ್ ನ ನಾಯಕರೊಬ್ಬರು ಹೇಳಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com