ಪಾಕ್ ಮಾಜಿ ಪ್ರಧಾನಿ ವಂಶಸ್ಥರಿಗೆ ನಕಲಿ ಪ್ರಮಾಣಪತ್ರ: ಕಂದಾಯಾಧಿಕಾರಿ ಅಮಾನತು

ಪಾಕ್ ಮೊದಲ ಪ್ರಧಾನಿ ವಂಶಸ್ಥರೆಂದು ಹೇಳಿಕೊಂದಿದ್ದವರಿಗೆ ಅಕ್ರಮವಾಗಿ ಉತ್ತರಾಧಿಕಾರದ ಪ್ರಮಾಣಪತ್ರ ನೀಡಿದ್ದ ಮುಜಾಫರ್ ನಗರದ ರೆವಿನ್ಯೂ ಇನ್ಸ್ ಪೆಕ್ಟರ್ ಅಮಾನತು.
ಅಮಾನತು
ಅಮಾನತು

ಮುಜಾಫರ್ ನಗರ: ಪಾಕಿಸ್ತಾನದ ಮೊದಲ ಪ್ರಧಾನಿ ಲಿಯಾಖತ್ ಅಲಿ ಖಾನ್ ಅವರ ವಂಶಸ್ಥರೆಂದು ಹೇಳಿಕೊಂದಿದ್ದವರಿಗೆ ಅಕ್ರಮವಾಗಿ ಉತ್ತರಾಧಿಕಾರದ ಪ್ರಮಾಣಪತ್ರ (ಸಕ್ಸೆಷನ್ ಸರ್ಟಿಫಿಕೆಟ್)ವನ್ನು ನೀಡಿದ್ದ ಮುಜಾಫರ್ ನಗರದ ರೆವಿನ್ಯೂ ಇನ್ಸ್ ಪೆಕ್ಟರ್ ನನ್ನು ಅಮಾನತು ಮಾಡಲಾಗಿದೆ.

ತಾವು ಪಾಕಿಸ್ತಾನದ ಮೊದಲ ಪ್ರಧಾನಿ ಲಿಯಾಖತ್ ಅಲಿ ಖಾನ್ ವಂಸ್ಥರಾಗಿದ್ದು ಮುಜಾಫರ್ ನಗರದಲ್ಲಿ ತಮಗೆ ಕೋಟ್ಯಂತರ ರೂಪಾಯಿ ಮೌಲ್ಯದ ಅಸ್ತಿ ಇದೆ ಎಂದು ಹೇಳಿದ್ದ ಜಮ್ಷೆದ್ ಅಲಿ ಖಾನ್ ಎಂಬ ವ್ಯಕ್ತಿಗೆ ಕಂದಾಯಾಧಿಕಾರಿ ತೇಜ್ ವೀರ್ ಸಿಂಗ್, ಉತ್ತರಾಧಿಕಾರದ ಪ್ರಮಾಣಪತ್ರವನ್ನು ನೀಡಿದ್ದರು. ಮುಜಾಫರ್ ನಗರದದಲ್ಲಿದ್ದ ವಿವಾದಿತ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಜಮ್ಷೆದ್ ಅಲಿ ಖಾನ್ ಅರ್ಜಿ  ಸಲ್ಲಿಸಿದಾಗ ಅಕ್ರಮವಾಗಿ ಉತ್ತರಾಧಿಕಾರದ ಪ್ರಮಾಣಪತ್ರ ಪಡೆದಿರುವುದು ಬೆಳಕಿಗೆ ಬಂದಿದೆ.  
ತನಿಖೆ ವೇಳೆ ಪ್ರಮಾಣ ಪತ್ರ ನಕಲಿ ಹಾಗೂ ಅಕ್ರಮ ಎಂಬುದು ಪತ್ತೆಯಾಗಿದ್ದು ತೇಜ್ ವೀರ್ ಸಿಂಗ್ ನನ್ನು ಅಮಾನತುಗೊಳಿಸಲಾಗಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಲಿಯಾಖತ್ ಅಲಿ ಖಾನ್ ಕರ್ನಾಲ್ ನ ಭೂಮಾಲಿಕರ ಮಾಲಿಕನ ಕುಟುಂಬದ ಹಿನ್ನೆಲೆಯುಳ್ಳವರಾಗಿದ್ದು, 1926 -1940 ರವರೆಗೆ ಅವಿಭಜಿತ ಪಂಜಾಬ್ ನ ಪ್ರಾಂತೀಯ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಮುಜಾಫರ್ ನಗರದಲ್ಲಿರುವ ಕೋಟ್ಯಂತರ ರೂ ಮೌಲ್ಯದ ಭೂಮಿ ತಮ್ಮದೆಂದು ಖಾನ್ ವಂಶಸ್ಥರು ಹಕ್ಕು ಪ್ರತಿಪಾದಿಸಲು ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com