
ನವದೆಹಲಿ: ಸೆ.30ರಿಂದ ಅ.8ರ ವರೆಗೆ ಇಸ್ಲಾಮಾಬಾದ್‍ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಸಂಸದೀಯ ಒಕ್ಕೂಟ (ಸಿಪಿಎ)ದ ವಾರ್ಷಿಕ ಸಮ್ಮೇಳನವನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕೆಂದು ಸ್ಪೀಕರ್ ಸುಮಿತ್ರಾ ಮಹಾಜನ್ ಒತ್ತಾಯಸಿದ್ದಾರೆ.
ಜಮ್ಮು-ಕಾಶ್ಮೀರ ವಿಧಾನಸಭೆ ಸ್ಪೀಕರ್ ಗೆ ಆಹ್ವಾನ ನೀಡದೆ ಪಾಕಿಸ್ತಾನ ಸಿಪಿಎಯ ಸಂವಿಧಾನ ಉಲ್ಲಂಘಿಸಿದೆ. ಹೀಗಾಗಿ ಸಮ್ಮೇಳನವನ್ನು ನಡೆಸುವ ಅರ್ಹತೆ ಕಳೆದುಕೊಂಡಿದೆ ಎಂದು ಮಹಾಜನ್ ಒಕ್ಕಟೂದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ಜಮ್ಮು-ಕಾಶ್ಮೀರ ವಿಧಾನಸಭೆ ಸ್ಪೀಕರ್ ಗೆ ಆಹ್ವಾನ ನೀಡದಿದ್ದರೆ ಸಮ್ಮೇಳನ ಬಹಿಷ್ಕರಿಸುವುದಾಗಿ ಸುಮಿತ್ರಾ ಮಹಾಜನ್ ಎಚ್ಚರಿಸಿದ್ದಾರೆ. ಇದೇ ವೇಳೆ, ಭಾರತದ ಒತ್ತಾಯವನ್ನು ಸಾರಾಸಗಟಾಗಿ ನಿರ್ಲಕ್ಷಿಸಿರುವ ಪಾಕಿಸ್ತಾನ, ಜಮ್ಮು ಮತ್ತು ಕಾಶ್ಮೀರದ ಕಾರಣ ಇಟ್ಟುಕೊಂಡು ಭಾರತ ಸಮ್ಮೇಳನವನ್ನು ಬಹಿಷ್ಕರಿಸಿದರೆ ನಾವೇನೂ ಮಾಡಲಾಗುವುದಿಲ್ಲ. ನಿರ್ಧಾರ ಅವರಿಗೆ ಬಿಟ್ಟದ್ದು ಎಂದು ಹೇಳಿದೆ.
Advertisement