ಇಂಗ್ಲಿಷ್ ಕಲಿಕೆಗೆ ಆಕ್ಸ್ಫರ್ಡ್ ಅಚೀವರ್

ಪ್ರಾಥಮಿಕ ಹೈಸ್ಕೂಲ್ ವಿದ್ಯಾರ್ಥಿಗಳು ಅಂತರ ಜಾಲದಲ್ಲಿ ಸುಲಭವಾಗಿ ಇಂಗ್ಲಿಷ್ ಕಲಿಯಲು ಅನುವಾಗುವಂತೆ ಆಕ್ಸ್ಫರ್ಡ್...
ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ `ಆಕ್ಸ್ಫರ್ಡ್ ಅಚೀವರ್' ಎಂಬ ಸಾಫ್ಟ್ ವೇರ್ ಬಿಡುಗಡೆ ಮಾಡಲಾಯಿತು
ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ `ಆಕ್ಸ್ಫರ್ಡ್ ಅಚೀವರ್' ಎಂಬ ಸಾಫ್ಟ್ ವೇರ್ ಬಿಡುಗಡೆ ಮಾಡಲಾಯಿತು

ಹೈದರಾಬಾದ್: ಪ್ರಾಥಮಿಕ ಹೈಸ್ಕೂಲ್ ವಿದ್ಯಾರ್ಥಿಗಳು ಅಂತರ ಜಾಲದಲ್ಲಿ ಸುಲಭವಾಗಿ ಇಂಗ್ಲಿಷ್ ಕಲಿಯಲು ಅನುವಾಗುವಂತೆ ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ `ಆಕ್ಸ್ಫರ್ಡ್ ಅಚೀವರ್' ಎಂಬ ಸಾಫ್ಟ್ ವೇರ್ ಬಿಡುಗಡೆ ಮಾಡಿದೆ.

ಇದನ್ನು ಮಂಗಳವಾರ ಬಿಡುಗಡೆ ಮಾಡಲಾಗಿದ್ದು 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಆಕ್ಸ್ಫರ್ಡ್ ಅಚೀವರ್ ಕೇಳುವುದು, ಮಾತನಾಡುವುದು, ಓದುವುದು, ಬರೆಯುವುದು, ವ್ಯಾಕರಣ ಮತ್ತು ಶಬ್ದಕೋಶ ಹೊಂದಿದ್ದು ತರಬೇತಿ ಮೂಲಕ ಇಂಗ್ಲಿಷ್ ಭಾಷೆ ಕಲಿಯಬಹುದಾಗಿದೆ.

ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ಈಗಾಗಲೇ ದೇಶದ ಹಲವು ವಲಯಗಳಲ್ಲಿ ಯಶಸ್ವಿಯಾಗಿ ಪ್ರಯೋಗ ನಡೆಸಿದ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಬಂದಿರುವ ಹಿಂಮಾಹಿತಿ ಸಕಾರಾತ್ಮಕವಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದು ಆಕ್ಸ್ಫರ್ಡ್‍ನ ಮೊದಲ ಹಣ ನೀಡಿ ಖರೀದಿಸುವ ಡಿಜಿಟಲ್ ಸೌಲಭ್ಯವಾಗಿದೆ. ಇಂತಹ ಇನ್ನಷ್ಟು ಆಪ್ ಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ಸಂಸ್ಥೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com