ಸಲ್ಲೇಖನ ವ್ರತ ನಿಷೇಧ ತೀರ್ಪಿಗೆ ವ್ಯಾಪಕ ಖಂಡನೆ

ಸಲ್ಲೇಖನ ವ್ರತ ಕಾನೂನುಬಾಹಿರ. ವ್ರತ ಕೈಗೊಳ್ಳುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ, ಶಿಗೊಳಪಡಿಸಬಹುದೆಂಬ ಜೈಪುರ ಹೈಕೋರ್ಟ್...
ಉಪವಾಸ ವ್ರತ
ಉಪವಾಸ ವ್ರತ

ಜೈಪುರ/ಬೆಂಗಳೂರು: ಸಲ್ಲೇಖನ ವ್ರತ ಕಾನೂನುಬಾಹಿರ. ವ್ರತ ಕೈಗೊಳ್ಳುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ, ಶಿಗೊಳಪಡಿಸಬಹುದೆಂಬ ಜೈಪುರ ಹೈಕೋರ್ಟ್ ತೀರ್ಪು ದೇಶಾದ್ಯಂತಜೈನ ಸಮೂಹದ ಅಸಮಾಧಾನಕ್ಕೆ ಕಾರಣವಾಗಿದೆ. ಜೈನಮಠಗಳು, ಜೈನ ಸಮುದಾಯದ ಸಂಘಟನೆಗಳು, ಸಾಹಿತಿಗಳು ಹಾಗೂ  ಉದ್ಯಮಿಗಳಿಂದ ಈ ತೀರ್ಪಿಗೆ ಭಾರಿ ವಿರೋಧ ವ್ಯಕ್ತವಾಗಿದೆ.
ಸುಸಂಸ್ಕೃತ ಧಾರ್ಮಿಕ ಆಚರಣೆಯನ್ನು ಆತ್ಮಹತ್ಯೆ ಹಾಗೂ ದಮಾಮರಣಕ್ಕೆ ಹೋಲಿಸಿರುವುದರ ಬಗ್ಗೆ ಹಿರಿಯ ಜೈನ ಸ್ವಾಮಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಬಗ್ಗೆಯೂ ಮುಖಂಡರು ಚಿಂತನೆ ನಡೆಸಿದ್ದಾರೆ. ಕೋರ್ಟ್ ಏನು ತೀರ್ಪು ನೀಡಿತ್ತು?: ಜೈನರ ಧಾರ್ಮಿಕ ಪದ್ದತಿಗ ಳಲ್ಲೊಂದಾದ ಸಲ್ಲೇಖನ ವ್ರತವನ್ನು ಕಾನೂನು ಬಾಹಿರ ಎಂದು ಸೋಮವಾರ ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿತ್ತು. ಈ ಉಪವಾಸ ವ್ರತದ ಮೂಲಕ ಪ್ರಾಣ ತ್ಯಜಿಸುವ ಈ ಪದ್ಧತಿ ಅನುಸರಿಸುವವರನ್ನು ಆತ್ಮಹತ್ಯೆ ಪ್ರಯತ್ನ ಹಾಗೂ ಆತ್ಮಹತ್ಯೆಗೆ ಕುಮ್ಮಕ್ಕು ನೀಡುವ ಆರೋಪದನ್ವಯ ಶಿಕ್ಷೆಗೆ ಒಳಪಡಿಸಬಹು ದೆಂದು ಕೋರ್ಟ್ ಆದೇಶ ಹೊರಡಿಸಿತ್ತು. ಸುಮಾರು ಹತ್ತು ವರ್ಷಗಳ ಹಿಂದೆ ಮಾನವ ಹಕ್ಕುಗಳ ಕಾರ್ಯಕರ್ತ ನಿಖಿಲ್  ಸೋನಿ ಸಲ್ಲೇಖನ ವ್ರತದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಕಾರಣ ಈ ಆಚರಣೆಯ ಮೇಲೆ ನಿಷೇಧವಿತ್ತು.

``ರಾಜ್ಯದಲ್ಲಿ ಯಾವುದೇ ಸ್ವರೂಪದಲ್ಲಿ ಸಲ್ಲೇಖನ ವ್ರತ ಆಚರಿಸುವುದನ್ನು ತಕ್ಷಣದಿಂದಲೇ ನಿಷೇಧಿಸಲಾಗಿ ದೆ. ಈ ಬಗೆಗಿನ ಯಾವುದೇ ದೂರುಗಳನ್ನು ಕ್ರಿಮಿನಲ್  ಪ್ರಕರಣವನ್ನಾಗಿ ಪರಿಗಣಿಸಿ ಸೆಕ್ಷನ್ 309 ಅಥವಾ 306ರ ಅಡಿಯಲ್ಲಿ ಶಿಕ್ಷೆ ಜರುಗಿಸಲಾಗುವುದು'' ಎಂದು ಮುಖ್ಯ ನ್ಯಾ. ಸುನಿಲ್ ಅಂಬ್ವಾನಿ ಮತ್ತು ನ್ಯಾ.ವಿ.ಎಸ್ ಸಿರಂಧನ ತಮ್ಮ ತೀರ್ಪಿನಲ್ಲಿ ತಿಳಿಸಿದ್ದರು.

ಸಲ್ಲೇಖನ ವ್ರತ ಎಂದರೇನು?: ದಿಗಂಬರ ಮುನಿಗಳು ಒಂದು ಹೊತ್ತು ಮಾತ್ರ ಆಹಾರ (ಬೆಳಕಿರುವಾಗಲೇ) ನೀರು ಸೇವನೆ ಮಾಡುತ್ತಾರೆ. ಈ ವ್ರತದಲ್ಲಿ ಮುನಿಗಳು ನಿರಾಹಾರಿಗಳಾಗಿ ಇರುವುದಿಲ್ಲ. ಬದಲಾಗಿ ತಮ್ಮ ಆತ್ಮ ಹಾಗೂ ಪಂಚೇಂದ್ರಿಯಗಳನ್ನು ನಿಗ್ರಹ ಮಾಡುವ ಸಲುವಾಗಿ ನಿತ್ಯ ತಾವು ಸೇವಿಸುವ ಆಹಾರ, ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತಾ ಹೋಗುತ್ತಾರೆ.
ಏಕೀ ವ್ರತಾಚರಣೆ?: ದಿಗಂಬರ ಮುನಿಗಳಿಗೆ ವಯಸ್ಸಾಗುತ್ತಾ ಹೋದಂತೆ ಧರ್ಮ ಪರಿಪಾಲನೆ ಹಾಗೂ ತಾವು ಸ್ವೀಕರಿಸಿದ ವ್ರತಗಳ ಆಚರಣೆ ತುಂಬಾಕಷ್ಟವಾಗುತ್ತಾ ಹೋಗುತ್ತದೆ. ಹೀಗಾಗಿ ಧರ್ಮ ಮತ್ತು ವ್ರತಕ್ಕೆ ಧಕ್ಕೆ ಬಾರದಿರಲಿ ಎಂಬ ಕಾರಣಕ್ಕೆ ಸಲ್ಲೇಖನ ವ್ರತ ಕೈಗೊಳ್ಳುತ್ತಾರೆ. ಈ ವೇಳೆ ಆಹಾರದಲ್ಲಿ ನಿಯಂತ್ರಣ ಸಾಧಿಸಿ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಾರೆ.

ಯಾರು ಕೈಗೊಳ್ಳುತ್ತಾರೆ?: ಜೈನ ಧರ್ಮದಲ್ಲಿ ದಿಗಂಬರ ಮುನಿಗಳನ್ನು ಬಿಟ್ಟರೆ ಮತ್ಯಾರೂ ಈ ವ್ರತ ಕೈಗೊಳ್ಳುವುದಿಲ್ಲ. ಅಲ್ಲದೆ, ದಿಗಂಬರರು ಈ ವ್ರತ ಕೈಗೊಳ್ಳುವಾಗ ಹಿರಿಯ ಮುನಿಗಳಿಂದ ದೀಕ್ಷೆ ಪಡೆದು ಆಚಾರ್ಯ ಪದವಿಯನ್ನು ತ್ಯಜಿಸುತ್ತಾರೆ.

ಯಮ ಸಲ್ಲೇಖನ: ಸಲ್ಲೇಖನ ವ್ರತದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆಹಾರ, ನೀರು ಸೇವನೆ ಇರುತ್ತದೆ. ಇದಾದ ನಂತರ ದಿಗಂಬರ ಮುನಿಗಳು ಪಂಚೇಂದ್ರಿಯ ಹಾಗೂ ಆತ್ಮ ನಿಗ್ರಹಗಳ ನಂತರ ಯಮ ಸಲ್ಲೇಖನ ವ್ರತ ಕೈಗೊಳ್ಳುತ್ತಾರೆ. ಈ ವ್ರತದಲ್ಲಿ ಅನ್ನ, ಪಾನ, ಖಾದ್ಯ, ಲೇಹ (ಖಾರ ಮತ್ತು ಸಿದ್ಧ ಪದಾರ್ಥಗಳು) ಗಳನ್ನು ತ್ಯಜಿಸುತ್ತಾರೆ. ಈ ಮೂಲಕ ಆತ್ಮ ದೇಹವನ್ನು
ಬಿಟ್ಟು ಮೋಕ್ಷಕ್ಕೆ ಹೋಗುವವರೆಗೂ ಈ ವ್ರತವನ್ನು ಆಚರಿಸುತ್ತಾರೆ.
ವ್ರತ ನಿಷೇಧ: ರಾಜ್ಯದ ಜೈನ ಪ್ರಮುಖರ ವಿರೋಧ ಸಲ್ಲೇಖನ ವ್ರತ ಆತ್ಮಹತ್ಯೆಗೆ ಸಮಮಾನ ಆಗಲು ಸಾಧ್ಯವಿಲ್ಲ. ಆದರೆ, ಸಲ್ಲೇಖನ ವ್ರತ ಮಾಡುವ ಉದ್ದೇಶ ಮುಂದಿನ ದಿನಗಳಲ್ಲಿ ಉಪಸರ್ಗ, ದುರ್ಬಿಕ್ಷ್ಯ, ವೃದಾಪ್ಯ, ಕಾಯಿಲೆ ಇವುಗಳಲ್ಲಿ ಯಾವುದಾದರೂ ಒಂದು ಬಂದ ಸಂದರ್ಭದಲ್ಲಿ ಈ ವ್ರತವನ್ನು ಮಾಡುವುದು, ಇಲ್ಲ ಆ ಜಾಗವನ್ನು ಬಿಟ್ಟುಹೋಗುವುದು ಎಂದರ್ಥ.


ರಾಜಸ್ತಾನ ಹೈಕೋರ್ಟ್ ತೀರ್ಪಿಗೆ ನಮ್ಮ ವಿರೋಧವಿದೆ
. - ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಕಾರ್ಕಳ ಜೈನ ಮಠ

ಸಲ್ಲೇಖನವನ್ನು ಆತ್ಮಹತ್ಯೆ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ. ರಾಜಸ್ಥಾನ ಹೈಕೋರ್ಟ್ ತೀರ್ಪು ತಪ್ಪು. ಇದರಿಂದ ಧಾರ್ಮಿಕ ಭಾವನೆಗೆ ಚ್ಯುತಿ ಬಂದಂತಾಗಿದೆ.
- ಗುಣಧರ ನಂದಿ ಮಹಾರಾಜ,
ಶ್ರೀಕ್ಷೇತ್ರ ವರೂರ, ಹುಬ್ಬಳ್ಳಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com