ಉದ್ಯೋಗಸ್ಥ ಸಂತ್ರಸ್ತರಿಗೆ ರಜೆ

ಉದ್ಯೋಗ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳ ದೂರು ವಿಚಾರಣಾ ಸಮಿತಿ ಪ್ರಕರಣದ ಆರೋಪಿಯ ವರ್ಗಾವಣೆ ಅಥವಾ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಉದ್ಯೋಗ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳ ದೂರು ವಿಚಾರಣಾ ಸಮಿತಿ ಪ್ರಕರಣದ ಆರೋಪಿಯ ವರ್ಗಾವಣೆ ಅಥವಾ ಸಂತ್ರಸ್ತರಿಗೆ ಮೂರು ತಿಂಗಳವೆರೆಗೆ ರಜೆಗೆ ಶಿಫಾರಸು ಮಾಡುವ ಅಧಿಕಾರ ಹೊಂದಿದೆ ಎಂದು ಕೇಂದ್ರ ಸಸರ್ಕಾರ ಹೇಳಿದೆ.

ಲೋಕ ಸಭೆಯಲ್ಲಿ ಬುಧವಾರ ಈ ವಿಷಯ ತಿಳಿಸಿದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಹಾಯಕ ಸಚಿವ ಡಾ.ಜಿತೇಂದ್ರ ಸಿಂಗ್, ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ, ನಿಷೇಧ ಹಾಗೂ ದೂರು ನಿರ್ವಹಣಾ ಕಾನೂನಿಂತರೆ ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿವರಿಸಿದರು.

ನೂತನ ಅಧಿಸೂಚನೆ ಪ್ರಕಾರ, ಯಾವುದೇ ದೂರಿಗೆ ಸಂಬಂಧಪಟ್ಟ ದೂರುದಾರರು ಅಥವಾ ಆರೋಪಿತರ ವರ್ಗಾವಣೆ ಅಥವಾ ಸಂತ್ರಸ್ತರಿಗೆ ಮೂರು ತಿಂಗಳ ಹೆಚ್ಚುವರಿ ರಜೆ ನೀಡಲು ಸಂಬಂಧಪಟ್ಟ ಸಂಸ್ಥೆಯ ಮುಖ್ಯಸ್ಥರಿಗೆ ಶಿಫಾರಸು ಮಾಡುವ ಅಧಿಕಾರವನ್ನು ದೂರು ನಿರ್ವಹಣಾ ಸಮಿತಿಗೆ ನೀಡಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com