
ನವದೆಹಲಿ: ನೆರೆ ರಾಷ್ಟ್ರ ಪಾಕಿಸ್ತಾನ ಜಮ್ಮು-ಕಾಶ್ಮೀರ ಗಡಿಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶುಭಾಷಯ ಕೋರಿದ್ದಾರೆ.
ಪಾಕಿಸ್ತಾನದ ನಾಗರಿಕರಿಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಗುರ್ದಾಸ್ ಪುರ ದಲ್ಲಿ ಪಾಕಿಸ್ತಾನದ ಉಗ್ರರು ನಡೆಸಿದ ದಾಳಿ, ಉದ್ಧಮ್ ಪುರದಲ್ಲಿ ಪಾಕಿಸ್ತಾನದ ಭಯೋತ್ಪಾದಕನನ್ನು ಸೆರೆ ಹಿಡಿಯಲಾಗಿದ್ದು ಪಾಕ್- ಭಾರತದ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆ ಉಂಟಾಗಿದ್ದರೂ ಪ್ರಧಾನಿ ಮೋದಿ ಪಾಕ್ ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ್ದಾರೆ.
ಸೆರೆ ಸಿಕ್ಕ ಉಗ್ರ ಮೊಹಮದ್ ನಾವೇದ್ ತಾನು ಪಾಕಿಸ್ತಾನಿ ಪ್ರಜೆ ಎಂದು ಹೇಳಿದರೂ, ಪಾಕಿಸ್ತಾನ ನಿರಾಕರಿಸಿದ್ದರಿಂದ ಭಾರತ- ಪಾಕಿಸ್ತಾನ ನಡುವಿನ ಸಂಬಂಧದಲ್ಲಿ ಬಿರುಕುಂಟಾಗಿದೆ. ಇದರ ಬೆನ್ನಲ್ಲೇ ಕಾಮನ್ವೆಲ್ತ್ ಸಂಸತ್ತಿನ ಒಕ್ಕೂಟದ ಸಮ್ಮೇಳನಕ್ಕೆ ಪಾಕಿಸ್ತಾನ ಜಮ್ಮು-ಕಾಶ್ಮೀರ ಸ್ಪೀಕರ್ ನ್ನು ಆಹ್ವಾನಿಸದೇ ಇರುವುದೂ ಉಭಯ ದೇಶಗಳ ನಡುವಿನ ಶೀಥಲ ಸಮರವನ್ನು ಬಹಿರಂಗಪಡಿಸಿದೆ.
Advertisement