
ನವದೆಹಲಿ: ಕೇಂದ್ರ ಜಾಗೃತ ಆಯುಕ್ತ (ಸಿವಿಸಿ) ಮತ್ತು ಜಾಗೃತ ಆಯುಕ್ತ(ವಿಸಿ)ರ ನೇಮಕಕ್ಕೆ ಸಂಬಂಧಿಸಿ ಗುರುವಾರ ಕೇಂದ್ರ ಸರ್ಕಾರ, ಸಿವಿಸಿ ಕೆ.ವಿ.ಚೌಧರಿ ಮತ್ತು ವಿಸಿ ಟಿ.ಎಂ.ಭಾಸಿನ್ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸಿವಿಸಿ ಮತ್ತು ವಿಸಿಯಾಗಿ ನೇಮಕಗೊಂಡವರು ಸ್ವಚ್ಛ ದಾಖಲೆ ಹೊಂದಿಲ್ಲ ಮತ್ತು ಅವರ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ ಎಂದು ಆರೋಪಿಸಿ ಕಾಮನ್ ಕಾಸ್ ಎಂಬ ಎನ್‍ಜಿಒ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, 2 ವಾರಗಳೊಳಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸಿವಿಸಿ ಮತ್ತು ವಿಸಿಗೆ ಸೂಚಿಸಿದೆ.
Advertisement