ವಾಘಾ ಗಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಂಡ ಗಡಿ ಭದ್ರತಾ ಯೋಧರು ಪಾಕಿಸ್ತಾನ ಯೋಧರೊಂದಿಗೆ ಸಿಹಿತಿಂಡಿ ಮಾತ್ರ...
ವಾಘಾ ಗಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
ವಾಘಾ ಗಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ಪಂಜಾಬ್: ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಂಡ ಗಡಿ ಭದ್ರತಾ ಯೋಧರು ಪಾಕಿಸ್ತಾನ ಯೋಧರೊಂದಿಗೆ ಸಿಹಿತಿಂಡಿ ಮಾತ್ರ ಹಂಚಿಕೊಳ್ಳಲಿಲ್ಲ.

ಪಂಜಾಬ್ ನ ಅಮೃತ್ ಸರ ಜಿಲ್ಲೆಯಲ್ಲಿರುವ 553 ಕಿ.ಮೀ ಉದ್ದದ ವಾಘಾ ಗಡಿಯ ವಿವಿಧ ಕೇಂದ್ರಗಳಲ್ಲಿ ಗಡಿ ಭದ್ರತಾ ಯೋಧರು 69ನೇ ಸ್ವಾತಂತ್ರ್ಯ ದಿನವನ್ನು ಇಂದು ಆಚರಿಸಿದರು. ಆದರೆ ಭಾರತೀಯ ಯೋಧರು ಮತ್ತು ಪಾಕಿಸ್ತಾನಿ ಸೈನಿಕರು ಪರಸ್ಫರ ಸಿಹಿತಿಂಡಿ ಹಂಚಿಕೊಂಡಿಲ್ಲ ಎಂದು ಅತ್ತಾರಿ-ವಾಘಾ ಚೆಕ್ ಪೋಸ್ಟ್ ಬಳಿಯ ಯೋಧರೊಬ್ಬರು ತಿಳಿಸಿದ್ದಾರೆ. ಇಲ್ಲಿ ಗಡಿ ಭದ್ರತಾ ಪಡೆಯ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಫ್.ಫರೂಕಿ ಧ್ವಜಾರೋಹಣ ನೆರವೇರಿಸಿದ್ದರು.

ಪಂಜಾಬ್ ನ ಗುರುದಾಸ್ಪುರ ಮತ್ತು ಜಮ್ಮು-ಕಾಶ್ಮೀರದ ಉದಂಪುರ್ ನಲ್ಲಿ ಇತ್ತೀಚೆಗೆ ಉಗ್ರಗಾಮಿಗಳ ದಾಳಿ ನಡೆದ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಸಿಹಿತಿಂಡಿಗಳನ್ನು ಸ್ವೀಕರಿಸುವುದಿಲ್ಲ ಎಂದು ಪೊಲೀಸ್ ನಿರ್ದೇಶಕ ಅನಿಲ್ ಪಲಿವಾಲ್ ಇತ್ತೀಚೆಗೆ ಹೇಳಿದ್ದರು.

ಈ ಹಿಂದಿನ ಪದ್ಧತಿಯಂತೆ, ಪ್ರತಿವರ್ಷ ಬಿಎಸ್ ಎಫ್ ಯೋಧರು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯಾದ ಆಗಸ್ಟ್ 14ರಂದು ಅವರಿಂದ ಸಿಹಿತಿಂಡಿ ಸ್ವೀಕರಿಸಿ, ಆಗಸ್ಟ್ 15ರಂದು ಅವರಿಗೆ ನೀಡುವ ಕ್ರಮ ರೂಢಿಸಿಕೊಂಡು ಬಂದಿದ್ದರು. ಆದರೆ ನಿನ್ನೆ ಭಾರತೀಯ ಸುಂಕ ಅಧಿಕಾರಿಗಳು ಪಾಕಿಸ್ತಾನದ ಅಧಿಕಾರಿಗಳಿಂದ ಸಿಹಿತಿಂಡಿ ಸ್ವೀಕರಿಸಿ ಇಂದು ಅವರಿಗೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com