ಮಲ್ಲಪ್ಪ ಚನ್ನಹಳ್ಳಿ ಸೇರಿ 67 ಮಂದಿಗೆ ಶೌರ್ಯ ಪ್ರಶಸ್ತಿ

ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಕರ್ನಾಟಕದ ಹುತಾತ್ಮ ಯೋಧ ಮಲ್ಲಪ್ಪ ಚನ್ನಹಳ್ಳಿ ಸೇರಿ ಒಟ್ಟು 67 ಮಂದಿಗೆ ಶನಿವಾರ ರಾಷ್ಟ್ರಪತಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಕರ್ನಾಟಕದ ಹುತಾತ್ಮ ಯೋಧ ಮಲ್ಲಪ್ಪ ಚನ್ನಹಳ್ಳಿ ಸೇರಿ ಒಟ್ಟು 67 ಮಂದಿಗೆ ಶನಿವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶೌರ್ಯ
ಪದಕ ಪ್ರದಾನ ಮಾಡಿದರು. ಮ್ಯಾನ್ಮಾರ್‍ಗೆ ನುಗ್ಗಿ ಬಂಡುಕೋರರ ಹತ್ಯೆ ಮಾಡಿದ 21 ಪ್ಯಾರಾ ರೆಜಿಮೆಂಟ್‍ನ ಎಂಟು ಮಂದಿ ಯೋಧರೂ ಶೌರ್ಯಪದಕ ಸ್ವೀಕರಿಸಿದವರ ಪಟ್ಟಿಯಲ್ಲಿದ್ದಾರೆ.
ಮಲ್ಲಪ್ಪ ಚನ್ನಹಳ್ಳಿ ಅವರಿಗೆ ಮರಣೋತ್ತ ರವಾಗಿ ಸೇನಾ ಪದಕ ನೀಡಿ ಗೌರವಿಸಲಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮಲ್ಲಪ್ಪ ಅವರು ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಕಾಯುವಾಗ ಉಗ್ರರ ಜತೆಗೆ ನಡೆಸಿದ ಕಾದಾಟದಲ್ಲಿ ಬಲಿ ಯಾಗಿದ್ದರು. ಗುಜರಾತ್ ಬಳಿ ಭಾರತದ ಕರಾವಳಿ ಪ್ರವೇಶಿಸಲು ಯತ್ನಿಸಿದ ಪಾಕ್ ಹಡಗನ್ನು ಹೊಡೆದುರುಳಿಸುವ ಕಾರ್ಯಾಚರಣೆ ಯ ನೇತೃತ್ವ ವಹಿಸಿದ್ದ ಕೋರ್ಟ್ ಗಾರ್ಡ್ ಹಡಗು ರಾಜರತನ್‍ನ ಕಮಾಂಡರ್ ಚಂದ್ರಶೇಖರ್ ಜೋಶಿಗೆ ತಟ್‍ರಕ್ಷಕ್ ಪದಕ ನೀಡಿ ಗೌರವಿಸಲಾಗಿದೆ. ಮಣಿಪುರದಲ್ಲಿ 18 ಯೋಧರ ಹತ್ಯೆ ಮಾಡಿದ ಬಂಡುಕೋರರ ವಿರುದ್ಧ ಮಾನ್ಮಾರ್ ನಲ್ಲಿ ನಡೆಸಿದ ಕಾರ್ಯಾಚರಣೆ ಯ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್ ಕರ್ನಲ್ ನೆಕ್ಟರ್ ಸಂಜೆನ್‍ಬಮ್  ಅವರಿಗೆ ದೇಶದ ಎರಡನೇ ಪರಮೋಚ್ಚ ಗೌರವವಾದ ಕೀರ್ತಿ ಚಕ್ರ ಪ್ರದಾನ ಮಾಡಲಾಯಿತು. ಇದರ ಜತೆಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಲಿಯಾಗಿದ್ದ ಸುಬೇದಾರ್ ರಾಜೇಶ್ ಕುಮಾರ್ ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರ ನೀಡಿ ಗೌರವಿಸಲಾಯಿತು. ಹಲಾವ್ದಾರ್ ತಂಕಾ ಕುಮಾರ್ ಲಿಂಬೂಗೆ ಶಾಂತಿ ಕಾಲದಲ್ಲಿ ನೀಡುವ ಮೂರನೇ ಅತಿ ದೊಡ್ಡ ಪರಮೋಚ್ಚ ಪ್ರಶಸ್ತಿ ಶೌರ್ಯ ಚಕ್ರ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com