

ನವದೆಹಲಿ: 68 ಜನರನ್ನು ಬಲಿತೆಗೆದುಕೊಂಡ ಸಂಜೋತಾ ಎಕ್ಸ್ ಪ್ರೆಸ್ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಕಮಲ್ ಚೌಹಾಣ್‍ನ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ), ಅಪರಾಧ ಕೃತ್ಯದ ಗಂಭೀರತೆ ಹಿನ್ನೆಲೆಯಲ್ಲಿ ಆತನಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಮನದೆ. ಪ್ರಕರಣದವಿಚಾರಣೆ ನಡೆಸುತ್ತಿರುವ ಪಂಜಾಬ್-ಹರಿಯಾಣ ಹೈಕೋರ್ಟ್‍ಗೆ ಶುಕ್ರವಾರ ಆಕ್ಷೇಪಣೆ ಸಲ್ಲಿಸಿರುವ ಎನ್‍ಐಎ, ಸ್ಫೋಟದ ಸಂಚು ರೂಪಿಸಿ, ಜಾರಿಗೆ ತರುವಲ್ಲಿ ಚೌಹಾಣ್ ಸೇರಿದಂತೆ ಆರೋಪಿತರ ಗುಂಪು ಭಾಗಿಯಾಗಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಹೇಳಿದೆ.
Advertisement