
ನವದೆಹಲಿ: ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವ ಶಿಕ್ಷಣದ ಹಕ್ಕಿನ(ಆರ್.ಟಿ.ಐ) ವ್ಯಾಪ್ತಿ ಇನ್ನಷ್ಟು ವಿಸ್ತರಣೆಗೊಳ್ಳಲಿದೆಯೇ? ಈಗಿರುವ 1 ನೇ ತರಗತಿಯಿಂದ 8 ನೇ ತರಗತಿಯವರೆಗಿನ ಆರ್.ಟಿ.ಇ ಯೋಜನೆಯನ್ನು ನರ್ಸರಿಯಿಂದ 10 ನೇ ತರಗತಿವರೆಗೆ ವಿಸ್ತರಿಸುವಂತೆ ಪ್ರಸ್ತಾಪ ಸಲ್ಲಿಸಲಾಗಿದೆ.
ಶಿಕ್ಷಣ ಕ್ಷೇತ್ರದ ಸುಧಾರಣೆ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿರುವ ಶಿಕ್ಷಣ ಕೇಂದ್ರೀಯ ಸಲಹಾ ಮಂಡಳಿ ಸಂಸ್ಥೆಯು ಈ ಪ್ರಸ್ತಾಪವನ್ನು ಒಪ್ಪಿದ್ದೇ ಆದಲ್ಲಿ ಆರ್.ಟಿ.ಇ ಕಾಯ್ದೆಯು ನರ್ಸರಿಯಿಂದ 10 ವರೆಗೆ ಅನ್ವಯವಾಗಲಿದೆ. ಆ.19 ರಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಕೇಂದ್ರ ಶಿಕ್ಷಣ ಸಲಹಾ ಮಂಡಳಿ ಈ ಬಗ್ಗೆ ಪರಿಶೀಲನೆ ನಡೆಸಲಿದೆ.
Advertisement