
ಮಧ್ಯಪ್ರದೇಶ: ಮಧ್ಯಪ್ರದೇಶದ 10 ಸ್ಥಳೀಯ ಸಂಸ್ಥೆಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲವು ದಾಖಲಿಸಿರುವುದನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಮರ್ಪಿಸಿದ್ದಾರೆ.
ಕಳೆದ ಆ.12 ರಂದು 10 ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ನಡೆದಿತ್ತು. 10 ಸ್ಥಳದಲ್ಲಿ ಬಿಜೆಪಿ 8 ಸ್ಥಳಗಳಾದ ಮೊರೆನಾ, ಉಜ್ಜೈನ್, ಹಾರ್ದಾ, ಚಕ್ ಘಾಟ್, ಭೈಂಸ್ ದೇಹಿ, ಕೋಟಾರ್, ಸುವಾಸರ ಮತ್ತು ವಿದಿಶಾಗಳಲ್ಲಿ ಭರ್ಜರಿ ಗೆಲವು ಸಾಧಿಸಿದೆ.
ಸ್ಥಳೀಯ ಚುನಾವಣೆಯ ಗೆಲುವು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಚೌಹಾಣ್, ಮೋದಿ ಅವರು ಜಾರಿಗೆ ತಂದ ಹೊಸ ನೀತಿ ಹಾಗೂ ಸಿದ್ದಾಂತಗಳೇ ಕಾರಣ. ಈ ಗೆಲವು ಮೋದಿಯವರಿಗೆ ಸಮರ್ಪಿತ. ನನಗೆ ಯಾವುದೇ ತೊಂದರೆಗಳಿಲ್ಲ. ಆದರೆ, ರಾಜ್ಯದ ವಿರುದ್ಧ ನಮ್ಮನ್ನು ಎತ್ತಿಕಟ್ಟಲು ಯತ್ನಿಸಿದವರ ವಿರುದ್ಧ ಕೋಪವಿದೆ. ಅನಾರೋಗ್ಯ ಪೀಡಿತ ಎಂಬ ಖ್ಯಾತಿಗೆ ತುತ್ತಾಗಿದ್ದ ಮಧ್ಯಪ್ರದೇಶವನ್ನು ಇದೀಗ ಆ ಖ್ಯಾತಿಯಿಂದ ಹೊರತಂದಿದ್ದೇವೆ. ಎಂದು ಹೇಳಿದ್ದಾರೆ.
Advertisement