
ನವದೆಹಲಿ: ಸಮಾನ ಹುದ್ದೆ ಸಮಾನ ಪಿಂಚಣಿ(ಒಆರ್ ಒಪಿ) ಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವಿನಿಂದ ತೀವ್ರ ಅಸಮಾಧಾನಗೊಂಡಿರುವ ನಿವೃತ್ತ ಸೇನಾನಿಗಳು, ಆ. 24 ರಿಂದ ಅನಿರ್ಧಿಷ್ಟಾವಧಿ ಉಪವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ.
24 ರಿಂದ ನಿವೃತ್ತ ಯೋಧರ ಒಂದು ತಂಡ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಿದೆ ಎಂದು ನಿವೃತ್ತ ಕರ್ನಲ್ ಅನಿಲ್ ಕೌಲ್ ತಿಳಿಸಿದ್ದಾರೆ.
ನವದೆಯಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ 64 ನೇ ದಿನ ಪೂರೈಸಿದೆ. ಸ್ವಾತಂತ್ರ್ಯ ದಿನದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಏರ್ಪಡಿಸಿದ್ದ ಚಹಾಕೂಟಕ್ಕೆ ಗೈರಾದ ಆಪ್ ಶಾಸಕ ಕರ್ನಲ್ ದೇವಿಂದರ್ ಸೇಹ್ರಾವತ್, ಒಆರ್ ಒಪಿಗೆ ಸಂಬಂಧಿಸಿ ಮಧ್ಯಪ್ರವೇಶಿಸಬೇಕೆಂದು ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
Advertisement