ದೇಶದೆಲ್ಲೆಡೆ ಹಿಂದುಗಳು ಎಂದರೆ ಭಯ ಹುಟ್ಟಿಸಿದ್ದು ಬಾಳಾ ಠಾಕ್ರೆ: ಶಿವಸೇನೆ

ಶಿವಸೇನೆಯ ಮಾಜಿ ವರಿಷ್ಠ ದಿವಂಗತ ಬಾಳಾ ಠಾಕ್ರೆಯನ್ನು ಭಯೋತ್ಪಾಕದನೆಂದು ಹೇಳಿ ಕಿಡಿಕಾರಿದ್ದ ತೆಹಲ್ಕಾ ನಿಯತಕಾಲಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿರುವ ಶಿವಸೇನೆ...
ಶಿವಸೇನೆಯ ಮಾಜಿ ವರಿಷ್ಠ ದಿವಂಗತ ಬಾಳಾ ಠಾಕ್ರೆ (ಸಂಗ್ರಹ ಚಿತ್ರ)
ಶಿವಸೇನೆಯ ಮಾಜಿ ವರಿಷ್ಠ ದಿವಂಗತ ಬಾಳಾ ಠಾಕ್ರೆ (ಸಂಗ್ರಹ ಚಿತ್ರ)

ಮುಂಬೈ: ಶಿವಸೇನೆಯ ಮಾಜಿ ವರಿಷ್ಠ ದಿವಂಗತ ಬಾಳಾ ಠಾಕ್ರೆಯನ್ನು ಭಯೋತ್ಪಾಕದನೆಂದು ಹೇಳಿ ಕಿಡಿಕಾರಿದ್ದ ತೆಹಲ್ಕಾ ನಿಯತಕಾಲಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿರುವ ಶಿವಸೇನೆಯು ಇದೀಗ ಉದ್ಧವ್ 'ಬಾಳಾ ಸಾಹೇಬ್ ಠಾಕ್ರೆ' ಅವರ ಸಿದ್ಧಾಂತಗಳನ್ನು ಸಮರ್ಥಿಸಿಕೊಂಡಿದ್ದು, ರಾಷ್ಟ್ರೀಯ ಹಿತಾಸಕ್ತಿಯಿಂದಾಗಿ ದೇಶದೆಲ್ಲೆಡೆ ಹಿಂದುಗಳೆಂದರೆ ಭಯ ಹುಟ್ಟಿಸುವಂತೆ ಮಾಡಿದ್ದು ಬಾಳಾ ಠಾಕ್ರೆ ಎಂದು ಮಂಗಳವಾರ ಹೇಳಿಕೊಂಡಿದೆ.

ಈ ಕುರಿತಂತೆ ತನ್ನ ವಾರಾಂತ್ಯದ ನಿಯತಕಾಲಿಕೆಯೊಂದರ ಲೇಖನವೊಂದರಲ್ಲಿ ಸಮರ್ಥನೆ ನೀಡಿರುವ ಶಿವಸೇನೆಯು, ಬಾಳಾ ಠಾಕ್ರೆ ಎಂದರೆ ಜನರಲ್ಲಿ ಸಾಕಷ್ಟು ಪ್ರೀತಿ ಹಾಗೂ ಗೌರವವಿತ್ತು. ಠಾಕ್ರೆ ಅವರು ಸಹ ರಾಷ್ಟ್ರೀಯತಾವಾದಿ ಆದರ್ಶಗಳ ಬಗ್ಗೆ ಹೆಮ್ಮೆ ಪಡುತ್ತಿದ್ದರು. ಬಾಳಾ ಠಾಕ್ರೆ ಅವರು ದೇಶದೆಲ್ಲೆಡೆ ಹಿಂದುಗಳೆಂದರೆ ಭಯ ಹುಟ್ಟಿಸುವಂತೆ ಮಾಡಿದ್ದರು ಎಂದು ಹೇಳಿಕೊಂಡಿದೆ.

ಭಾರತದಲ್ಲಿ ಹಿಂದುಗಳು ಜೀವನ ನಡೆಸುವುದಕ್ಕೆ ಹೆಮ್ಮೆ ಪಡಬೇಕು. ಪಾಕಿಸ್ತಾನ ಉಗ್ರರಿಗೆ ತಕ್ಕ ಉತ್ತರ ನೀಡಬೇಕಿದ್ದರೆ, ಹಿಂದುಗಳು ಹುಲಿಯಂತೆ ಘರ್ಜಿಸುತ್ತಿರಬೇಕು. ಈ ಬಗ್ಗೆ ಹಿಂದುಗಳು ಸಾಕಷ್ಟು ಧರ್ಮ ಪರಿಪಾಲನೆ ಮಾಡುವವರಾಗಬೇಕಿದೆ. ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಲು ಹಿಂದುಗಳು ಮಾನವ ಬಾಂಬ್ ಗಳಾಗಿ ತಯಾರಾಗಿ ಪಾಕಿಸ್ತಾನವನ್ನು ನಾಶಪಡಿಸಬೇಕಿದೆ. ಬಾಳಾ ಠಾಕ್ರೆ ಅವರು ಎಲ್ಲಾ ಧರ್ಮವನ್ನು ಸಮಾನವಾಗಿ ನೋಡುತ್ತಿದ್ದರು. ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿ 1984ರಲ್ಲಿ ಹತ್ಯೆಗೀಡಾದಾಗ ಠಾಕ್ರೆಯವರು ಏನನ್ನೂ ಮಾತನಾಡದೇ ಸುಮ್ಮನಿದ್ದರು. ಇದಕ್ಕೆ ಕಾರಣ ಸಿಖ್ ಸಮುದಾಯದವರು ಶಾಂತಿಯುವಾಗಿ ದೇಶದೆಲ್ಲೆಡೆ ಜೀವನ ನಡೆಸುವ ಸಲುವಾಗಿ ಎಂದು ಹೇಳಿದೆ.

ಇತ್ತೀಚೆಗಷ್ಟೇ ತೆಹಲ್ಕಾ ಎಂಬ ನಿಯತಕಾಲಿಕೆಯೊಂದರಲ್ಲಿ ಕವರ್ ಸ್ಟೋರಿಯೊಂದು ಪ್ರಕಟವಾಗಿತ್ತು. ಕವರ್ ಸ್ಟೋರಿಯಲ್ಲಿ  ಹೂ ಇಸ್ ಬಿಗ್ಗೆಸ್ಟ್ ಟೆರರಿಸ್ಟ್ (ಇವರಲ್ಲಿ ಯಾರು ದೊಡ್ಡ ಭಯೋತ್ಪಾದಕ) ಎಂದು ಹೇಳಿ ಭೂಗತ ದಾವೂದ್ ಇಬ್ರಾಹಿಂ, 1993ರ ಮುಂಬೈ ಸ್ಪೋಟದ ದೋಷಿ ಯಾಕೂಬ್ ಮೆಮನ್ ಮತ್ತು ಖಾಲಿಸ್ತಾನಿ ಟೆರರ್ ಮುಖಂಡ ಜರ್ನೈಲ್ ಸಿಂಗ್ ಬಿಂದ್ರನ್ ವಾಲೆ ಸೇರಿದಂತೆ ಬಾಳಾ ಠಾಕ್ರೆಯನ್ನು ಸೇರಿಸಿತ್ತು. ತೆಹಲ್ಕಾದ ಈ ಕವರ್ ಸ್ಟೋರಿ ಹಲವು ವಿವಾದಕ್ಕೆ ಕಾರಣವಾಗಿತ್ತಲ್ಲದೇ, ತೆಹಲ್ಕಾ ಮ್ಯಾಗಜೀನ್ ವಿರುದ್ಧ ದೂರು ದಾಖಲಾಗಿತ್ತು.

ಇದೀಗ ತೆಹಲ್ಕಾದ ಕವರ್ ಸ್ಟೋರಿಗೆ ಪರೋಕ್ಷವಾಗಿ ತಿರುಗೇಟು ನೀಡಿರುವ ಶಿವಸೇನೆ ತನ್ನ ನಿಯತಕಾಲಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಿದ್ದು, ನಿಯತಕಾಲಿಕೆ ಪ್ರಕಟಣೆಯನ್ನು ಹೆಚ್ಚು ಮಾಡಲು ಪ್ರಚಾರಪಡಿಸುವ ಸಲುವಾಗಿ ಬಾಳಾ ಠಾಕ್ರೆ ಬಗ್ಗೆ ಇಲ್ಲಸಲ್ಲದ ತಪ್ಪು ಆರೋಪಗಳನ್ನು ಮಾಡಿದರೆ. ಇದು ಜನರಲ್ಲಿರುವ ತಾಳ್ಮೆಯನ್ನು ಕೆಣಕಿದಂತಾಗುತ್ತದೆ. ಈಗಾಗಲೇ ನೆಲ ಕಚ್ಚಿರುವ ನಿಯತಕಾಲಿಕೆಯು ಈ ರೀತಿಯ ಸುಳ್ಳು ಪ್ರಚಾರ ಮಾಡಿದರೆ ಜನರಲ್ಲಿರುವ ಕೋಪ ನೆತ್ತಿಗೇರಿ ನಿಯತಕಾಲಿಕೆಗೆ ಈಗಿರುವ ಮಾರುಕಟ್ಟೆ ಸಹ ಹಾಳಾಗುವಂತಾಗುತ್ತದೆ ಎಂದು ತಿರುಗೇಟು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com