
ನವದೆಹಲಿ: ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ವಿಜಯ್ ದರ್ದಾ ಹಾಗೂ ಇತರೆ ಐವರಿಗೆ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ.
ಕಲ್ಲಿದ್ದಲು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಭರತ್ ಪರಶರ್ ಅವರಿದ್ದ ಪೀಠ, ವಿಜಯ್ ದರ್ದಾ, ಅವರ ಮಗ ದೇವೇಂದ್ರ ದರ್ದಾ, ಗುಪ್ತಾ, ಕಲ್ಲಿದ್ದಲು ಸಚಿವಾಲಯದ ಅಧಿಕಾರಿ ಕೆ.ಎಸ್.ಕ್ರೊಪಾ, ಕೆ.ಸಿ.ಸಮ್ರಿಯಾ ಮತ್ತು ಮನೋಜ್ ಕುಮಾರ್ ಜಯಸ್ವಾಲ್ ಅವರಿಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದು, ಪ್ರತಿಯೊಬ್ಬ ಆರೋಪಿಯೂ 1 ಲಕ್ಷ ಶೂರಿಟಿ ನೀಡುವಂತೆ ಹೇಳಿದೆ.
ಕಲ್ಲಿದ್ದಲು ಹಗರಣ ಕುರಿತಂತೆ ಹಲವು ವಿವಾದಗಳು ಸೃಷ್ಟಿಯಾಗಿದ್ದವು. ಹೀಗಾಗಿ ಪ್ರಕರಣವನ್ನು ಕಳೆದ ವರ್ಷ ನವೆಂಬರ್ 20 ರಂದು ಸಿಬಿಐ ತನಿಖೆ ವಹಿಸಲಾಗಿದ್ದು, ಪ್ರಕರಣ ಸಂಬಂಧ ತನಿಖೆ ಕೈಗೊಂಡ ಸಿಬಿಐ ಅಧಿಕಾರಿಗಳು ಆರೋಪಪಟ್ಟಿಯಲ್ಲಿ, ದರ್ದಾ, ಅವರ ಪುತ್ರ ದೇವೇಂದ್ರ ದರ್ದಾ, ಜೆಲ್ ಡಿ ಯವತ್ಮಾಲ್ ಎನರ್ಜಿ ಪ್ರೈ.ಲಿ. ಮತ್ತು ಅದರ ನಿರ್ದೇಶಕ ಮನೋಜ್ ಜೈಸ್ವಾಲ್ ಅವರನ್ನು ಹೆಸರಿಸಿದ್ದರು. ಅರೋಪಪಟ್ಟಿಯಲ್ಲಿ ಇವರೆಲ್ಲರೂ ಮೋಸದಿಂದ ಕಲ್ಲಿದ್ದಲು ಬ್ಲಾಕ್ಗಳನ್ನು ಪಡೆದಿದ್ದಾರೆ ಎಂದೂ ಆರೋಪಿಸಲಾಗಿತ್ತು. ಆರೋಪಪಟ್ಟಿಯನ್ನು ಪರಿಶೀಲಿಸಿದ ವಿಶೇಷ ನ್ಯಾಯಾಲಯವು ಜುಲೇ 31 ರಂದು ಆರೋಪಿಗಳೆಲ್ಲರಿಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.
Advertisement