ಹಸ್ತಮೈಥುನ ಪ್ರಕರಣ: ನನಗೂ ಇಂಥ ಅನುಭವ ಆಗಿದೆ- ಟ್ವಿಂಕಲ್ ಖನ್ನಾ

ರಸ್ತೆಯಲ್ಲಿ ಮಹಿಳೆ ಎದುರೇ ಹಸ್ತಮೈಥುನ ಮಾಡಿಕೊಂಡ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಯುವಕ ಗೋಪಾಲ್ ವಾಲ್ಮಿಕಿ ಜಾಮೀನಿನ ಮೇಲೆ ಹೊರ...
ಟ್ವಿಂಕಲ್ ಖನ್ನಾ
ಟ್ವಿಂಕಲ್ ಖನ್ನಾ

ನವದೆಹಲಿ: ರಸ್ತೆಯಲ್ಲಿ ಮಹಿಳೆ ಎದುರೇ ಹಸ್ತಮೈಥುನ ಮಾಡಿಕೊಂಡ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಯುವಕ ಗೋಪಾಲ್ ವಾಲ್ಮಿಕಿ ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ಅದರೆ, ಈ ಬಗ್ಗೆ ಚರ್ಚೆ ಮಾತ್ರ ಇನ್ನೂ ನಿಂತಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಪತ್ನಿ ಹಾಗೂ ರಾಜೇಶ್ ಖನ್ನಾ ಪುತ್ರಿ ನಟಿ ಟ್ವಿಂಕಲ್ ಖನ್ನಾ ಅವರು, ಸಾರ್ವಜನಿಕರು ಆಗಾಗ ಈ ರೀತಿ ಪ್ರಸಂಗಗಳನ್ನು ಎದುರಿಸುತ್ತಿರುತ್ತಾರೆ. ಅದರೆ, ಯಾರೂ ವರದಿ ಮಾಡುವ ಗೋಜಿಗೆ ಹೋಗುವುದಿಲ್ಲ ಎಂದಿದ್ದಾರೆ. ಅಲ್ಲದೆ ನಾನು ಸಹ ಬಾಲ್ಯದ ದಿನಗಳಲ್ಲಿ ಇಂಥ ಘಟನೆಯನ್ನು ಎದುರಿಸಿದ್ದೆ ಎಂದು ಟ್ವಿಂಕಲ್ ಹೇಳಿರುವುದಾಗಿ ಜೀ ನ್ಯೂಸ್ ವರದಿ ಮಾಡಿದೆ.

ನಾನು 12 ವರ್ಷದವಳಿದ್ದಾಗ ಹ್ಯಾಂಗಿಂಗ್ ಗಾರ್ಡನ್ಸ್ ಗೆ ಶಾಲಾ ಪ್ರವಾಸಕ್ಕೆಂದು ಹೋಗಿದ್ದೆ. ಒಬ್ಬಳೆ ಸುತ್ತಾಡುವಾಗ ನನ್ನ ಎದುರಿಗೆ ಒಬ್ಬ ವ್ಯಕ್ತಿ ಹಸ್ತಮೈಥುನ ಮಾಡಿಕೊಂಡಿದ್ದನ್ನು ನೋಡಿ, ಭಯಗೊಂಡು ಓಡಿ ಬಂದೆ. ಇಂಥ ವ್ಯಕ್ತಿಗಳು ಮಾನಸಿಕವಾಗಿ ಅಸ್ವಸ್ಥರಾಗಿರುತ್ತಾರೆ. ಇಂಥವರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದು ಅಗತ್ಯ ಎಂದಿದ್ದಾರೆ.

ಕಳೆದ ಸೋಮವಾರ ಗೋಪಾಲ್ ವಾಲ್ಮಿಕಿ ತನ್ನ ಎದುರೇ ಹಸ್ತಮೈಥುನ ಮಾಡಿಕೊಂಡು, ಅಸಭ್ಯವಾಗಿ ವರ್ತಿಸಿದ ಎಂದು ಆರೋಪಿಸಿ, ಅಮೆರಿಕ ಮೂಲದ ಲೇಖಕಿ ಮರಿಯಾನಾ ಆಬ್‌ಡೋ ಅವರು, ಆತನ ಫೋಟೋವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಟ್ವಿಟರ್ ಹಾಕಿ ಘಟನೆಯನ್ನು ವಿವರಿಸಿದ್ದರು. ಇದು ಸಾಮಾಜಿಕ ತಾಣದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.

ಮರಿಯಾನಾ ಅವರ ಟ್ವಿಟರ್‌ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಾರ್ಯಾಲಯ, ಆರೋಪಿಯ ಬಂಧನಕ್ಕೆ ಕಾರ್ಯಾಚರಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡು, ಮರಿಯಾನಾ ಅವರ ಹೇಳಿಕೆ ಪಡೆದಿದ್ದ ದಕ್ಷಿಣ ಮುಂಬೈನ ಕೊಲಬ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದರೆ ವಿಚಾರಣೆ ವೇಳೆ ಗೋಪಾಲ್ ವಾಲ್ಮಿಕಿ ತಾನು ಹಸ್ತಮೈಥುನ ಮಾಡಿಕೊಂಡಿಲ್ಲ, ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಮಹಿಳೆ ತನ್ನನ್ನು ನೋಡಿದರು ಅಷ್ಟೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com