
ಶ್ರೀನಗರ: ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್‌ಎಸ್‌ಎ)ರ ಮಟ್ಟದ ಮಾತುಕತೆಗೆ ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡರಿಗೆ ಆಹ್ವಾನ ನೀಡಿದ ಪಾಕ್‌ಗೆ ಕಠಿಣ ಸಂದೇಶ ರವಾನಿಸಿರುವ ಭಾರತ, ಗುರುವಾರ ಮೂವರು ಪ್ರತೇಕವಾದಿ ನಾಯಕರಿಗೆ ಗೃಹ ಬಂಧನ ವಿಧಿಸಿದೆ.
ಹುರಿಯತ್ ಕಾನ್ಫೆರೆನ್ಸ್ ನಾಯಕ ಸಯೀದ್ ಅಲಿ ಶಾಹ್ ಗೀಲಾನಿ, ಹುರಿಯತ್ ಗ್ರೂಪ್ ಅಧ್ಯಕ್ಷ ಮಿರ್ವಾಝ್ ಉಮರ್ ಫಾರೂಖ್ ಹಾಗೂ ಹುರಿಯತ್‌ನ ಅಬ್ಬಾಸ್ ಅನ್ಸಾರಿಗೆ ಗೃಹ ಬಂಧನ ವಿಧಿಸಲಾಗಿದೆ.
ಎನ್‌ಎಸ್‌ಎ ಮಾತುಕತೆಗೂ ಮುನ್ನ ಪಾಕಿಸ್ತಾನ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್‌ರನ್ನು ಭೇಟಿಯಾಗುವಂತೆ ನಿನ್ನೆ ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡರಿಗೆ ಪಾಕ್ ರಾಯಭಾರಿ ಕಚೇರಿ ಆಹ್ವಾನಿ ನೀಡಿತ್ತು. ಈ ಆಹ್ವಾನವನ್ನು ಪ್ರತ್ಯೇಕವಾದಿ ನಾಯಕರು ಸ್ವೀಕರಿಸಿದ್ದರು.
ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜತೆಗೆ ಮಾತುಕತೆಗಾಗಿ ಪಾಕ್ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅವರು ಆಗಸ್ಟ್ 23ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ.
Advertisement