
ಕೊಲೊಂಬೊ: ದ್ವೀಪ ರಾಷ್ಟ್ರ ಶ್ರೀಲಂಕಾದ ಪ್ರಧಾನಿಯಾಗಬೇಕೆಂಬ ಮಹಿಂದ ರಾಜಪಕ್ಸೆ ಕನಸು ಭಗ್ನಗೊಂಡಿದೆ. ಹಾಲಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಮಾತ್ರವಲ್ಲ ಅವರ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್‍ಪಿ) 106 ಸ್ಥಾನ ಗೆದ್ದುಕೊಂಡಿದೆ.
ರಾಜ ಪಕ್ಸ ಅವರ ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲಯನ್ಸ್ (ಯುಪಿಎಫ್ಎ) 95 ಸ್ಥಾನ ಗೆದ್ದು ಕೊಂಡಿದೆ. ಗಮನಾರ್ಹ ವಿಚಾರ ವೆಂದರೆ ಯುಎನ್‍ಪಿಗೆ ಶ್ರೀಲಂಕಾ ಸಂಸತ್‍ನಲ್ಲಿ ಸರಳ ಬಹುಮತ 113 ಅನ್ನು ಪಡಕೊಳ್ಳಲು 7 ಸ್ಥಾನಗಳ ಸ್ಥಾನಗಳ ಕೊರತೆ ಅನುಭವಿಸುತ್ತಿದೆ ಎಂದು ಶ್ರೀಲಂಕಾದ ಚುನಾವಣಾ ಆಯೋಗ ತಿಳಿಸಿದೆ. ಹಾಲಿ ಪ್ರಧಾನಿಯಾಗಿರುವ ರನಿಲ್ ವಿಕ್ರಮಸಿಂಘೆ ಎರಡು ಬಾರಿ ಅಧ್ಯಕ್ಷರಾಗಿದ್ದವರು.
ಫಲಿತಾಂಶದ ಬಗ್ಗೆ ವಿಕ್ರಮ ಸಿಂಘೆ ಹರ್ಷವ್ಯಕ್ತಪಡಿಸಿದ್ದಾರೆ. ಈ ವರ್ಷದ ಜನವರಿ 8ರಂದು ದ್ವೀಪರಾಷ್ಟ್ರದ ಜನರು ಮೈತ್ರಿಪಾಲ ಸಿರಿಸೇನೆ ಅವರಿಗೆ ಅಭೂತಪೂರ್ವ ಬೆಂಬಲ ನೀಡಿದ್ದರು. ಅದೇ ರೀತಿಯ ಬೆಂಬಲವನ್ನು ತಮಗೂ ನೀಡಿದ್ದಾರೆ ಎಂದಿದ್ದಾರೆ. ಶ್ರೀಲಂಕಾದ ಉತ್ತರ ಭಾಗದಲ್ಲಿ ತಮಿಳು ನ್ಯಾಷನಲ್ ಅಲಯನ್ಸ್ (ಟಿಎನ್‍ಎ)ಹೆಚ್ಚಿನ ಎಲ್ಲ ಸ್ಥಾನಗಳನ್ನು ಗೆದ್ದುಕೊಂಡಿದೆ.
Advertisement