ಫಿಫಾ ವರ್ಲ್ಡ್ ಕಪ್ ಗಿಂತಲೂ 2013 ಕುಂಭಮೇಳ ಚೆನ್ನಾಗಿತ್ತು; ಹಾರ್ವರ್ಡ್ ವಿವಿ

2013 ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ನಡೆದ ಮಹಾ ಕುಂಭ ಮೇಳ ಫಿಫಾ ವರ್ಲ್ಡ್ ಕಪ್ಅನ್ನು ನಾಚಿಸುವಂತಿತ್ತು ಎಂದು ಹಾರ್ವರ್ಡ್ ವಿಶ್ವ ವಿದ್ಯಾನಿಯಲಯದ ....
2013 ರಲ್ಲಿ ನಡೆದ ಕುಂಭಮೇಳದ ಸಂಗ್ರಹ ಚಿತ್ರ
2013 ರಲ್ಲಿ ನಡೆದ ಕುಂಭಮೇಳದ ಸಂಗ್ರಹ ಚಿತ್ರ

ನವದೆಹಲಿ: 2013 ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ನಡೆದ ಮಹಾ ಕುಂಭ ಮೇಳ ಫಿಫಾ ವರ್ಲ್ಡ್ ಕಪ್ಅನ್ನು ನಾಚಿಸುವಂತಿತ್ತು ಎಂದು ಹಾರ್ವರ್ಡ್ ವಿಶ್ವ ವಿದ್ಯಾನಿಯಲಯದ ಅಧ್ಯಯನ ತಿಳಿಸಿದೆ. ಕುಂಭ ಮೇಳ ಮ್ಯಾಪಿಂಗ್ ದಿ ಎಫೆಮೆರಲ್ ಮೆಗಾ ಸಿಟಿ ಎಂಬ ಪುಸ್ತಕದಲ್ಲಿ 2013 ಜನವರಿ ಮತ್ತು ಫೆಬ್ರವರಿ ಯಲ್ಲಿ ಸುಮಾರು 55 ದಿನಗಳ ಕಾಲ ನಡೆದ ಕುಂಭ ಮೇಳದ ಬಗ್ಗೆ ಬರೆಯಲಾಗಿದೆ.

ಉತ್ತರ ಪ್ರದೇಶ ಸರ್ಕಾರ ಆಯೋಜಿಸಿದ್ದ ಕುಂಭಮೇಳದ ಬಗ್ಗೆ ಸುಮಾರು 447 ಪುಟಗಳಲ್ಲಿ ವಿಮರ್ಶೆ ಮಾಡಲಾಗಿದೆ. ಸುಮಾರು 24 ಕೀಮೀ ವರೆಗೆ ಕುಂಭ ಮೇಳಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿತ್ತು. 55 ದಿನಗಳಲ್ಲಿ ಸುಮಾರು 100 ಮಿಲಿಯನ್ ಜನರು ಬಂದು ಹೋಗಿದ್ದಾರೆ. ಗಂಗಾ. ಯಮುನಾ ಹಾಗೂ ಸರಸ್ವತಿ ನದಿಯಲ್ಲಿ ಸುಮರು 5 ಮಿಲಿಯನ್ ಭಕ್ತಾದಿಗಳು ಪುಣ್ಯಸ್ನಾನ ಮಾಡಿದ್ದಾರೆ ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ. ಸುಮಾರು 390 ಮಿಲಿಯನ್ ಜನರು ಕುಂಭ ಮೇಳದ ಸಮಯದಲ್ಲಿ ಮೊಬೈಲ್ ನಿಂದ ಕರೆ, ಹಾಗೂ ಸಂದೇಶಗಳನ್ನು ರವಾನಿಸಿದ್ದಾರೆ ಎಂದು ತಿಳಿಸಲಾಗಿದೆ.

ಎಲ್ಲರಿಗೂ ಎಲ್ಲ ಅಗತ್ಯತೆಗಳನ್ನು ಪೂರೈಸಬೇಕು ಎಂಬ ಮಹತ್ವಾಕಾಂಕ್ಷೆ ಭಾರತಕ್ಕಿದೆ. ಆದರೆ ಅದನ್ನು ಈಡೇರಿಸುವಲು ಸಾಮರ್ಥ್ಯ ಕಡಿಮೆ. ಆದರೆ 2013 ರಲ್ಲಿ ನಡೆದ ಕುಂಭ ಮೇಳ ಈ ಎಲ್ಲಾ ನಿರಾಶೆಗಳನ್ನು ಮಹಾ ಕುಂಭ ಮೇಳ ಪ್ರಾಧಿಕಾರ ದೂರ ಮಾಡಿ, ಬಂದ ಭಕ್ತ ಗಣಕ್ಕೆ ಅಗತ್ಯವಾದ ಅನುಕೂಲ ಕಲ್ಪಿಸಿತ್ತು ಎಂದು ವಿವರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com