ತಿಹಾರ್ ಜೈಲಿನಲ್ಲಿ ಮಾರಣಾಂತಿಕ ಹಲ್ಲೆ: ನಿರ್ಭಯಾ ರೇಪಿಸ್ಟ್ ಆರೋಪ

ತಿಹಾರ್ ಜೈಲಿನಲ್ಲಿ ಸಹ ಖೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಪ್ರಮುಖ ಅಪರಾಧಿಗಳಲ್ಲಿ...
ತಿಹಾರ್ ಕಾರಾಗೃಹ
ತಿಹಾರ್ ಕಾರಾಗೃಹ

ನವದೆಹಲಿ: ತಿಹಾರ್ ಜೈಲಿನಲ್ಲಿ  ಸಹ ಖೈದಿಗಳು ಮಾರಣಾಂತಿಕ ಹಲ್ಲೆ  ನಡೆಸಿದ್ದಾರೆ ಎಂದ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಪ್ರಮುಖ ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮಾ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾನೆ.

ಜೈಲಿನ ಸುಮಾರು 5-6 ಮಂದಿ ಸಹ ಖೈದಿಗಳು ಆಗಸ್ಟ್ 15 ಮತ್ತು 16 ರಂದು ನಡೆಸಿದ ದಾಳಿಯಲ್ಲಿ ವಿನಯ್ ಶರ್ಮಾ ಎಡ ಗೈ ಮತ್ತು ಎಡ ಕಾಲಿನ ಮೂಳೆ ಮುರಿದಿದೆ ಎಂದು ದೆಹಲಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ರೀತೇಶ್ ಸಿಂಗ್ ಮುಂದೆ ಹೇಳಿಕೆ ದಾಖಲಿಸಲಾಗಿದೆ.

ವಕೀಲ ಎ.ಪಿ ಸಿಂಗ್ ವಿನಯ್ ಶರ್ಮಾ ಪರ ಅಫೀಲು ಸಲ್ಲಿಸಿದ್ದು, ಸಹ ಖೈದಿಗಳು ಕೊಲ್ಲುವ ಬೆದರಿಕೆ ಹಾಕಿರುವುದಾಗಿ ಎಂದು ತಿಳಿಸಿದ್ದಾರೆ.

2012 ಡಿಸೆಂಬರ್ 16 ರಂದು ದೆಹಲಿಯಲ್ಲಿ ಚಲಿಸುವ ಬಸ್ ನಲ್ಲಿ ನಡೆದಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಅಕ್ಷಯ್ ಠಾಕೂರ್, ವಿನಯ್ ಶರ್ಮಾ. ಪವನ್ ಗುಪ್ತಾ, ಮತ್ತು ಮುಖೇಶ್ ಎಂಬ ನಾಲ್ವರು ಅಪರಾಧಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ವಿನಯ್ ಶರ್ಮಾ ವಿರುದ್ದ ಮತ್ತೊಂದು ರಾಬರಿ ಕೇಸ್ ದಾಖಲಾಗಿದ್ದು. ಈ ಪ್ರಕರಣದ ವಿಚಾರಣೆ ವೇಳೆ ತನ್ನ ಮೇಲೆ ನಡೆದ ಹಲ್ಲೆ ಬಗ್ಗೆ ನ್ಯಾಯಾಧೀಶರ ಮುಂದೆ ವಿನಯ್ ಶರ್ಮಾ ಹೇಳಿಕೆ ನೀಡಿದ್ದಾನೆ.  ಜೈಲಿನಲ್ಲಿ ನಡೆದ ಹಲ್ಲೆಯ ಬಗ್ಗೆ ಆಗಸ್ಟ್ 25 ರಂದು ಸಂಪೂರ್ಣ ವರದಿ ನೀಡುವಂತೆ ಕೋರ್ಟ್ ಕಾರಾಗೃಹ ಅಧಿಕಾರಿಗಳಿಗೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com