
ಮುಂಬೈ: 26 /11 ರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿ ಉಗ್ರ ಅಜ್ಮಲ್ ಕಸಬ್ ನನ್ನು ನಿಯಂತ್ರಿಸಿದ ಆರೋಪ ಎದುರಿಸುತ್ತಿರುವ ಅಬು ಜುಂದಾಲ್, ತಪ್ಪನ್ನು ಒಪ್ಪಿಕೊಳ್ಳುವಂತೆ ತನಿಖಾಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾನೆ.
ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕಳೆದ ಎರಡು ವಾರಗಳಿಂದ ಉಪವಾಸ ಮುಷ್ಕರ ಪ್ರಾರಂಭಿಸಿದ್ದಾನೆ, ಜುಂದಾಲ್ ನ ಪರ ವಕೀಲರು ಎಂಸಿಒಸಿಎಗೆ ಅರ್ಜಿ ಸಲ್ಲಿಸಿರುವ ಅರ್ಜಿಯಲ್ಲಿ ತನ್ನ ಕಕ್ಷಿದಾರನಿಗೆ ತಪ್ಪನ್ನು ಒಪ್ಪಿಕೊಳ್ಳುವಂತೆ ಚಿತ್ರ ಹಿಂಸೆ ನೀಡಲಾಗುತ್ತಿದೆ, ಇದರಿಂದ ನೊಂದಿರುವ ಅಬು ಜುಂದಾಲ್, ಉಪವಾಸ ನಡೆಸುತ್ತಿರುವುದರಿಂದ ಆತನ ರಕ್ತದಲ್ಲಿ ಕಿಟೊನೆಸ್ ಕೆಟೋನ್ ಉಪಸ್ಥಿತಿ ಕಂಡುಬಂದಿದೆ ಎಂದು ವಕೀಲರು ವೈದ್ಯಕೀಯ ವರದಿಯನ್ನು ನೀಡಿದ್ದಾರೆ.
ಕಿರುಕುಳದಿಂದ ನೊಂದಿರುವ ಅಬು ಜುಂಡಾಲ್ ಈ ರೀತಿ ಬದುಕುವುದಕ್ಕಿಂತ ಸಾಯುವುದೇ ಉತ್ತಮ ಎಂದು ಹೆಳಿದ್ದಾನಂತೆ. ಕತ್ತಲೆ ಕೋಣೆಯಲ್ಲಿ ಆತನನ್ನು ಬಂಧಿಸಿಟ್ಟಿದ್ದು, ಖಿನ್ನತೆಗೊಳಗಾಗಿದ್ದಾನೆ, ಆದ್ದರಿಂದ ಆತನನ್ನು ಸಾಮಾನ್ಯ ಖೈದಿಗಳನ್ನು ಬಂಧಿಸಿರುವ ಬಂಧಿಕಾನೆಗೆ ಸ್ಥಳಾಂತರಿಸಬೇಕು ಎಂದು ಅಬು ಜುಂದಾಲ್ ಪರ ವಕೀಲರು ಎಂಸಿಒಸಿಎಗೆ ಮನವಿ ಮಾಡಿದ್ದಾರೆ.
Advertisement