
ಮುಂಬಯಿ: 26/11ಮುಂಬಯಿ ದಾಳಿಯ ರೂವಾರಿ ಮಹಮದ್ ಅಪ್ಜಲ್ ಕಸಬ್ ಗೆ ಗಲ್ಲು ಶಿಕ್ಷೆ ವಿಧಿಸಿದ್ದ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂ.ಎಲ್ ತಹಿಲ್ಯಾನಿ ಇಂದು ನಿವೃತ್ತಿಯಾಗಲಿದ್ದಾರೆ.
28 ವರ್ಷಗಳ ನ್ಯಾಯಾಂಗ ಸೇವೆಯಲ್ಲಿ ತಹಿಲ್ಯಾನಿ ಹಲವು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿಯಾದ ಬಳಿಕ ಆಗಸ್ಟ್ 24 ರಂದು ಮಹಾರಾಷ್ಟ್ರದ ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಬಾಲಿವುಡ್ ಸಂಗೀತ ನಿರ್ದೇಶಕ ಗುಲ್ಷನ್ ಕುಮಾರ್ ಹತ್ಯೆ, ಟ್ರೇಡ್ ಯೂನಿಯನ್ ಮುಖ್ಯಸ್ಥ ಎಂಪಿ ದತ್ತ ಸಮಂತ್ ಕೊಲೆ ಪ್ರಕರಣ ಹಾಗೂ 2009ರ ಮುಂಬಯಿ ದಾಳಿ ರೂವಾರಿ ಅಪ್ಜಲ್ ಕಸಬ್ ಪ್ರಕರಣ ಸೇರಿದಂತೆ ಹಲವು ಸಂವೇದನಾ ಶೀಲ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಿದ್ದರು.
1987 ರಲ್ಲಿ ಬಾಂದ್ರಾ ಮೆಟ್ರೊ ಪಾಲಿಟನ್ ಮ್ಯಾಜಿಸ್ರ್ಟೇಟ್ ಕೋರ್ಟ್ ನ್ಯಾಯಮೂರ್ತಿಗಳಾಗಿ ವೃತ್ತಿ ಆರಂಭಿಸಿದ ತಹಿಲ್ಯಾನಿ 1997 ರಲ್ಲಿ ಮುಂಬಯಿ ಮುಂಬಯಿ ಸೆಷನ್ ಕೋರ್ಟ್ ನ ಜಡ್ಜ್ ಆಗಿ ನೇಮಕಗೊಂಡರು.
Advertisement