ಗ್ಯಾಂಗ್‌ರೇಪ್ ಬಗ್ಗೆ ವಿವಾದಾತ್ಮಕ ಹೇಳಿಕೆ: ಮುಲಾಯಂ ಸಿಂಗ್‌ಗೆ ಕೋರ್ಟ್ ಸಮನ್ಸ್

ಗ್ಯಾಂಗ್‌ರೇಪ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೆ ಸ್ಥಳೀಯ ಕೋರ್ಟ್...
ಮುಲಾಯಂ ಸಿಂಗ್ ಯಾದವ್
ಮುಲಾಯಂ ಸಿಂಗ್ ಯಾದವ್

ಮಹೊಬ(ಉತ್ತರ ಪ್ರದೇಶ): ಗ್ಯಾಂಗ್‌ರೇಪ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೆ ಸ್ಥಳೀಯ ಕೋರ್ಟ್ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ.

ಹೇಳಿಕೆ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಕುಲ್ಪಹದ್ ತೆಹಸಿಲ್‌ನ ಸಿವಿಲ್ ಜಡ್ಜ್ ಅಂಕಿತ್ ಗೋಯಲ್ ಅವರು, ಈ ಸಂಬಂಧ ಸಮಾಜವಾದಿ ಪಕ್ಷದ ಮುಖ್ಯಸ್ಥನಿಗೆ ಸಮನ್ಸ್ ಜಾರಿ ಮಾಡಿದ್ದಾರೆ.

ಮಹಿಳೆಯ ಅಸಭ್ಯ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 3 ಮತ್ತು 4, ಹಾಗೂ ಐಪಿಸಿ ಸೆಕ್ಷನ್ 504, 505 ಮತ್ತು 509ರಡಿ ಸಮನ್ಸ್ ಜಾರಿ ಮಾಡಲಾಗಿದೆ.

ಅತ್ಯಾಚಾರ ಮಾಡಿದವನು ಒಬ್ಬನೇ ಆದರೂ ದೂರಿನಲ್ಲಿ ನಾಲ್ಕು ಮಂದಿಯ ಹೆಸರಿರುತ್ತದೆ. ನಾಲ್ಕು ಮಂದಿ ಒಬ್ಬ ಮಹಿಳೆಯನ್ನು ಅತ್ಯಾಚಾರ ಮಾಡಲು ಹೇಗೆ ಸಾಧ್ಯ. ಇದು ಸಾಧ್ಯವೇ ಇಲ್ಲ ಎಂದು ಬುಧವಾರ ಮುಲಾಯಂ ಸಿಂಗ್ ಯಾದವ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com