
ಇಸ್ತಾಂಬುಲ್: ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ಈಗ ಹೊಸ ಬಾಂಬ್ ಸಿದಟಛಿಪಡಿಸಿದ್ದಾರೆ. ಅದು ಏಡ್ಸ್ ಬಾಂಬ್! ಏಡ್ಸ್‍ಸೋಂಕಿನಿಂದ ಬಳಲುತ್ತಿರುವ ಉಗ್ರರನ್ನು ಆತ್ಮಾಹುತಿ ದಾಳಿಗೆ ಬಳಸಿಕೊಳ್ಳಲು ಉಗ್ರ ಸಂಘಟನೆ ಮುಂದಾಗಿದೆ.
ಈಗಾಗಲೇ 16 ಉಗ್ರರಿಗೆ ಏಡ್ಸ್ ಇರುವುದು ಖಚಿತವಾಗಿದೆ. ಅವರನ್ನು ಐಎಸ್ ನಾಯಕತ್ವ ಆತ್ಮಾಹುತಿ ದಾಳಿಗಾಗಿ ಸಿದ್ಧ ಮಾಡುತ್ತಿದೆ ಎಂದು ``ಎಆರ್‍ಎ'' ಸುದ್ದಿಸಂಸ್ಥೆ ಮತ್ತು ``ಝೀ
ನ್ಯೂಸ್'' ವರದಿ ಮಾಡಿವೆ. ಈ ರೀತಿ ಆತ್ಮಾಹುತಿ ದಾಳಿಗೆ ಸಿದಟಛಿಪಡಿಸಲಾಗಿರುವವರಲ್ಲಿ ಬಹುತೇಕರು ವಿದೇಶಿ ಹೋರಾಟಗಾರರು. ಮೊರೊಕ್ಕೋದಿಂದ ಅಪಹರಿಸಲ್ಪಟ್ಟ
ಮಹಿಳೆಯರ ಜತೆಗೆ ಲೈಂಗಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಅವರಿಗೆ ಏಡ್ಸ್ ತಗುಲಿದೆ. ಆ ಇಬ್ಬರು ಮಹಿಳೆಯರು ಈಗ ಟರ್ಕಿಗೆ ಪರಾರಿಯಾಗಿದ್ದಾರೆ.
ಏಡ್ಸ್ ತಗುಲಿರುವ ಉಗ್ರರನ್ನು ಸದ್ಯ ಶದ್ದಾದಿಯಲ್ಲಿ ಪ್ರತ್ಯೇಕ ಘಟಕದಲ್ಲಿಡಲಾಗಿದೆ. ಈ ಹಿಂದೆಯೂ ಐಎಸ್ ಉಗ್ರರಿಗೆ ಏಡ್ಸ್ ತಗುಲಿರುವ ಸುದ್ದಿ ಹರಡಿತ್ತು. ಇಂಡೋನೇಷ್ಯಾದ
ಉಗ್ರನೊಬ್ಬನಿಂದ ಅದು ಲೈಂಗಿಕ ಗುಲಾಮಗಿರಿಗೆ ಬಳಸಿಕೊಳ್ಳಲು ಉದ್ದೇಶಿಸಿದ ಮಹಿಳೆಯೊಬ್ಬಳಿಗೆ ಹಬ್ಬಿತ್ತು. ಆಕೆಯನ್ನು ನಂತರ ಮಾರಾಟ ಮಾಡಲಾಗಿತ್ತು. ಈ ಮೂಲಕ ಆಕೆಯಿಂದ ಉಳಿದ ಉಗ್ರರಿಗೂ ಏಡ್ಸ್ ತಗುಲಿರುವ ಆತಂಕ ಶುರುವಾಗಿ ದೆ. ಏಡ್ಸ್ ಪೀಡಿತ ಇಂಡೋನೇಷ್ಯಾದ ಉಗ್ರನನ್ನು ಕಳೆದ ಜೂನ್‍ನಲ್ಲಿ ಹತ್ಯೆ ಮಾಡಲಾಗಿತ್ತು. ಹೆಚ್ಚುತ್ತಿರುವ
ಏಡ್ಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಐಎಸ್‍ಐಎಸ್ ತನ್ನ ಉಗ್ರರಿಗೆ ಏಡ್ಸ್ ಪರೀಕ್ಷೆಗೊಳಪಡಿಸಲು ನಿರ್ಧರಿಸಿದೆ.
Advertisement