
ಲಖನೌ: ಭಾರತ-ಪಾಕಿಸ್ತಾನ ನಡುವೆ ನಡೆಯಬೇಕಿದ್ದ ಎನ್ಎಸ್ಎ ಮಾತುಕತೆ ರದ್ದುಗೊಂಡಿರುವುದಕ್ಕೆ ಪಾಕಿಸ್ತಾನವೇ ಕಾರಣವಾಗಿದ್ದು, ಯುಎಫ್ಎ ಕಾರ್ಯಸೂಚಿಯಿಂದ ಪಾಕಿಸ್ತಾನ ವಿಷಯಾಂತರ ಮಾಡಿತು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.
ಯುಎಫ್ಎ ನಲ್ಲಿ ನಡೆದಿದ್ದ ಭಾರತ- ಪಾಕಿಸ್ತಾನದ ಪ್ರಧಾನಿಗಳ ನಡುವಿನ ಒಪ್ಪಂದದ ಕಾರ್ಯಸೂಚಿಯ ಪ್ರಕಾರ ಎನ್ಎಸ್ಎ ಸಭೆಯಲ್ಲಿ ಭಯೋತ್ಪಾದನೆ ಬಗ್ಗೆ ಮಾತ್ರ ಚರ್ಚೆ ನಡೆಯಬೇಕಿತ್ತು. ಆದರೆ ಪಾಕಿಸ್ತಾನ ವಿಷಯಾಂತರ ಮಾಡಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತ ಮಾತುಕತೆ ನಡೆಸಲಿ ಸಿದ್ಧವಿತ್ತಾದರೂ ಪಾಕಿಸ್ತಾನ ಅದನ್ನು ರದ್ದುಗೊಳಿಸಿರುವುದು ದುರದೃಷ್ಟಕರ, ಯುಎಫ್ ನಲ್ಲಿ ಭಾರತ- ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳ ಮಾತುಅಕತೆಯಲ್ಲಿ ಮೂರನೇ ವ್ಯಕ್ತಿಯ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
Advertisement