ಒಆರ್ ಒಪಿ ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ವಿಕೆ ಸಿಂಗ್ ಪುತ್ರಿ ಭಾಗಿ

ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯನ್ನು ಶೀಘ್ಪವೇ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ರಕ್ಷಣಾ ಇಲಾಖೆಯ ನಿವೃತ್ತ ಸಿಬ್ಬಂದಿ ...
ಮೃಣಾಲಿನಿ ಸಿಂಗ್
ಮೃಣಾಲಿನಿ ಸಿಂಗ್

ನವದೆಹಲಿ: ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯನ್ನು ಶೀಘ್ಪವೇ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ರಕ್ಷಣಾ ಇಲಾಖೆಯ ನಿವೃತ್ತ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರ ಸಚಿವ ಹಾಗೂ ರಕ್ಷಣಾ ಇಲಾಖೆ ಮಾಜಿ ಮುಖ್ಯಸ್ಥ ವಿ.ಕೆ ಸಿಂಗ್ ಪುತ್ರಿ ಮೃಣಾಲಿನಿ ಸಿಂಗ್ ಸಾಥ್ ನೀಡಿದ್ದಾರೆ.

ಜೂನ್ 12 ರಿಂದ ದೆಹಲಿಯಿ ಜಂಥರ್ ಮಂಥರ್ ನಲ್ಲಿ ನಿವೃತ್ತ ರಕ್ಷಣಾ ಸಿಬ್ಬಂದಿ ಹಾಗೂ ಮೃತ ಸಿಬ್ಬಂದಿಯ ವಿಧವಾ ಪತ್ನಿಯರು ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆ ಅನುಷ್ಠಾನ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ. ಸುಮಾರು ಸುಮಾರು 2.5 ಮಿಲಿಯನ್ ನಿವೃತ್ತ ಸಿಬ್ಬಂದಿ ಈ ಸೌಲಭ್ಯಕ್ಕಾಗಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿರುವ ವಿಕೆ ಸಿಂಗ್ ಪುತ್ರಿ ಮೃಣಾಲಿನಿ ಸಿಂಗ್, ನಿವೃತ್ತಯೋಧರು ನಡೆಸುತ್ತಿರುವ ಪ್ರತಿಭಟನೆಗೆ ನನ್ನ ಬೆಂಬಲವಿದೆ. ಹೀಗಾಗಿ ನಾನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ. ಒಂದುವೇಳೆ ಈ ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹ ಆರಂಭಿಸಿದರೇ ತಾವು ಕೂಡ ಉಪವಾಸ ಮಾಡುವುದಾಗಿ ಅವರು ತಿಳಿಸಿದ್ದಾರೆ.

ನನ್ನ ತಾತ ಕೂಡ ಒಬ್ಬ ಸೈನಿಕರಾಗಿದ್ದರು. ನಾನು ಯೋಧ ಕುಟುಂಬದಿಂದ ಬಂದವಳು. ನನ್ನ ಮಗ ಕೂಡ ಈ ದೇಶದ ಒಬ್ಬ ಸೈನಿಕನಾಗುತ್ತಾನೆ ಎಂದು ಹೇಳಿರುವ ಮೃಣಾಲಿನಿ ಸಿಂಗ್ ಶೀಘ್ರವೇ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com