ಗುರುದ್ವಾರಕ್ಕೆ ಶೂ ಧರಿಸಿ ಪ್ರವೇಶಿಸಿದ ಎಸ್ಐಗೆ ಅಮಾನತು ಶಿಕ್ಷೆ

ಸಿಖ್ ಸಮುದಾಯದ ಧಾರ್ಮಿಕ ಕೇಂದ್ರ ಗುರುದ್ವಾರಕ್ಕೆ ಶೂ ಧರಿಸಿ, ಶಸ್ತ್ರಾಸ್ತ್ರಗಳೊಂದಿಗೆ ಪ್ರವೇಶಿಸಿದ ಗುವಾಹಟಿ ಸಬ್ ಇನ್ಸ್ ಪೆಕ್ಟರ್ (ಎಸ್ಐ) ನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಗುರುದ್ವಾರ(ಸಂಗ್ರಹ ಚಿತ್ರ
ಗುರುದ್ವಾರ(ಸಂಗ್ರಹ ಚಿತ್ರ

ಗುವಾಹಟಿ: ಸಿಖ್ ಸಮುದಾಯದ ಧಾರ್ಮಿಕ ಕೇಂದ್ರ ಗುರುದ್ವಾರಕ್ಕೆ ಶೂ ಧರಿಸಿ, ಶಸ್ತ್ರಾಸ್ತ್ರಗಳೊಂದಿಗೆ ಪ್ರವೇಶಿಸಿದ ಗುವಾಹಟಿ ಸಬ್ ಇನ್ಸ್ ಪೆಕ್ಟರ್ (ಎಸ್ಐ) ನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಅಸ್ಸಾಮಿ ಟಿವಿ ಚಾನೆಲ್ ವೊಂದು ಗುರುದ್ವಾರದ ಸಮಿತಿ ಸದಸ್ಯ ಗುರುಪ್ರೀತ್ ಸಿಂಗ್ ಉಪ್ಪಲ್ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡನ ವಿರುದ್ಧ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ, ಗುರುಪ್ರೀತ್ ಸಿಂಗ್ ಉಪ್ಪಲ್ ನ ಶೋಧಕ್ಕಾಗಿ ಸಬ್ ಇನ್ಸ್ ಪೆಕ್ಟರ್ ಧನ್ಮೋನಿ ತಿಮಂಗ್ ಹಾಗೂ ಇನ್ನು ಮೂವರು ಪೊಲೀಸ್ ಪೇದೆಗಳು ಗುರುದ್ವಾರ ಸಿಂಗ್ ಸಭಾಗೆ ತೆರಳಿದ್ದಾರೆ. ಈ ವೇಳೆ ಶೂ ಧರಿಸಿ ಒಳಗೆ ಪ್ರವೇಶಿಸಿದರ ಕಾರಣ ಎಸ್ಐ ನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಗುರುದ್ವಾರಕ್ಕೆ ಶೂ ಧರಿಸಿ ಪ್ರವೇಶಿಸಿದ ಘಟನೆ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯಿ ತನಿಖೆಗೆ ಆದೇಶಿಸಿದ್ದಾರೆ. ಪೊಲೀಸ್ ಜಂಟಿ ಆಯುಕ್ತ ಎನ್ಎಂಎಎಸ್ಎಫ್ ಹಕ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಏಳು ದಿನಗಳಲ್ಲಿ ಈ ಬಗ್ಗೆ ವರದಿ ನೀಡಬೇಕೆಂದು ಸರ್ಕಾರ ಅದೇಶಿಸಿದೆ.
ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡುವುದು ಅತ್ಯಂತ ಮುಖ್ಯವಾಗಿದೆ. ಧಾರ್ಮಿಕ ಪಾವಿತ್ರ್ಯತೆಯನ್ನು ಕಾಪಾಡಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಗೊಗೋಯಿ ಹೇಳಿಕೆ ನೀಡಿದ್ದಾರೆ. ಗುರುದ್ವಾರದ ಸಮಿತಿ ಸದಸ್ಯ, ಗುರುಪ್ರೀತ್ ಸಿಂಗ್ ಉಪ್ಪಲ್ ಅಸ್ಸಾಮಿ ಟಿವಿ ಚಾನೆಲ್ ನ ಎಂಡಿ ಮಗಳ ಫೋಟೊವನ್ನು ಫೇಸ್ ಬುಕ್ ನಲ್ಲಿ ಹಾಕಿ, ಸರಿಯಾದ ಬಟ್ಟೆ ಧರಿಸುವಂತೆ ಎಂಡಿ ಮಗಳಿಗೆ ಬುದ್ಧಿ ಹೇಳಿ ಎಂದು ಟಿವಿ ಚಾನೆಲ್ ಗೆ ಸಲಹೆ ನೀಡಿದ್ದ. ಇದರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com