ಆಗಸ್ಟ್ 28ರಂದು ಒಆರ್ ಪಿಒ ಘೋಷಣೆ ಸಾಧ್ಯತೆ

ಕೇಂದ್ರ ಸರ್ಕಾರ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯನ್ನು ಆಗಸ್ಟ್ 28 ರಂದು ಘೋಷಣೆ ಮಾಡುವ ಸಾಧ್ಯತೆಯಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಕೇಂದ್ರ ಸರ್ಕಾರ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯನ್ನು ಆಗಸ್ಟ್ 28 ರಂದು ಘೋಷಣೆ ಮಾಡುವ ಸಾಧ್ಯತೆಯಿದೆ. ಒಆರ್ ಪಿಒ ಜಾರಿ ಮಾಡುವಂತೆ ಒತ್ತಾಯಿಸಿ ನಿವೃತ್ತ ಸೈನಿಕರು ಹಾಗೂ ಮೃತ ಯೋಧರ ಪತ್ನಿಯರು ಜಂಥರ್ ಮಂಥರ್ ನಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಮಣಿದಿರುವ ಸರ್ಕಾರ ಯೋಜನೆ ಘೋಷಣ್ ಮಾಡಲು ಸಿದ್ಥತೆ ನಡೆಸಿದೆ.

1965 ರ ಪಾಕಿಸ್ತಾನ- ಭಾರತ ಯುದ್ಧದ 50 ನೇ ವರ್ಷಾಚರಣೆ ಆಗಸ್ಟ್ 28 ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನೆ ನರೇಂದ್ರ ಮೋದಿ ಒಆರ್ಒಪಿ  ಯೋಜನೆ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.ಇನ್ನು ಆಗಸ್ಟ್ 29 ರಂದು ನಡೆಯುವ 50 ನೇ ವರ್ಷದ ಗೋಲ್ಡನ್ ಜ್ಯೂಬಿಲಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿವೃತ್ತ ಸೈನಿಕರು ನಿರ್ಧರಿಸಿದ್ದಾರೆ.

ಇನ್ನು ಒಆರ್ಒಪಿ  ಯೋಜೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಉಪವಾಸ ಕೈಗೊಂಡಿರುವ ನಿವೃತ್ತ ಸೈನಿಕರಲ್ಲಿ ಮೂವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯು ನಲ್ಲಿಡಲಾಗಿದೆ. ತಮ್ಮ ಬೇಡಿಕೆ ಈಡೇರುವವರೆಗೂ ಉಪವಾಸ ಸತ್ಯಾಗ್ರಹ ಕೈ ಬಿಡುವುದಿಲ್ಲ ಎಂದು ನಿವೃತ್ತ ಯೋಧರು ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಒಆರ್ಒಪಿ ಯೋಜನೆ ಜಾರಿಗೆ ತರಲು ಮುಂದಾಗಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com