
ಮುಂಬೈ: ಬಾಲಿವುಡ್ ನಟ ಹಾಗೂ ಮುಂಬೈ ಸರಣಿ ಸ್ಫೋಟದ ಅಪರಾಧಿ ಸಂಜಯ್ ದತ್ ಅವರಿಗೆ ಮಹಾರಾಷ್ಟ್ರ ಸರ್ಕಾರ ಮತ್ತೆ 30 ದಿನಗಳ ಕಾಲ ಪೆರೋಲ್ ನೀಡಿದೆ.
ತಮ್ಮ ಮಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಪೆರೋಲ್ ಕೋರಿ ಕಳೆದ ಜೂನ್‌ನಲ್ಲಿ ಸಂಜಯ್ ದತ್ ಅರ್ಜಿ ಸಲ್ಲಿಸಿದ್ದರು. ಇದು ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಬಾಲಿವುಡ್ ನಟನಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಎಎನ್‌ಐ ವರದಿಯ ಪ್ರಕಾರ, ಸಂಜಯ್ ತಮ್ಮ ಪುತ್ರಿ ಮೂಗಿನ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಪೆರೋಲ್ ಮಂಜೂರು ಮಾಡಲಾಗಿದೆ. ಎರಡು ದಿನಗಳ ಹಿಂದೆಯೇ ಪುಣೆ ವಿಭಾಗೀಯ ಆಯುಕ್ತರು ಪೆರೋಲ್‌ಗೆ ಅನುಮತಿ ನೀಡಿದ್ದು, ಒಂದೇರಡು ದಿನಗಳಲ್ಲೇ ದತ್ ಜೈಲಿನಿಂದ ಮನಗೆ ತೆರಳಲಿದ್ದಾರೆ.
ಸಂಜಯ್ ದತ್ ಅವರು ಜೈಲು ಶಿಕ್ಷೆಗೆ ಒಳಗಾದ ನಂತರ ಇದುವವರೆಗೆ ಒಟ್ಟು 146 ದಿನ ಜೈಲಿನಿಂದ ಹೊರಗಿದ್ದಾರೆ. ಕಳೆದ ಜನವರಿ 2014ರಲ್ಲಿ 30 ದಿನಗಳ ಪೆರೋಲ್ ಪಡೆದಿದ್ದ ದತ್ ಅದನ್ನು ಮತ್ತೆ 60 ದಿನಗಳವರೆಗೆ ವಿಸ್ತರಿಸಿಕೊಂಡಿದ್ದರು. ಬಳಿಕ ಮತ್ತೆ ಡಿಸೆಂಬರ್‌ನಲ್ಲಿ 14 ದಿನಗಳ ಪೆರೋಲ್ ಪಡೆದಿದ್ದರು. ಅಲ್ಲದೆ ಮತ್ತೆ ವಿಸ್ತರಿಸುವಂತೆ ಕೋರಿದ್ದರು. ಆದರೆ ಇದಕ್ಕೆ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಾ ಸರ್ಕಾರ ಪೆರೋಲ್ ವಿಸ್ತರಿಸಲು ನಿರಾಕರಿಸಿತ್ತು.
Advertisement