ಮೀಸಲಾತಿಗಾಗಿ ಪ್ರತಿಭಟನೆ ತೀವ್ರಗೊಳಿಸುತ್ತೇವೆ, ಹಿಂಸಾಚಾರಕ್ಕೆ ಪೊಲೀಸರೇ ಕಾರಣ: ಹಾರ್ದಿಕ್ ಪಟೇಲ್

ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡದೇ ಇದ್ದಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಹಾರ್ದಿಕ್ ಪಟೇಲ್ ಎಚ್ಚರಿಸಿದ್ದಾರೆ.
ಹಾರ್ದಿಕ್ ಪಟೇಲ್(ಸಂಗ್ರಹ ಚಿತ್ರ)
ಹಾರ್ದಿಕ್ ಪಟೇಲ್(ಸಂಗ್ರಹ ಚಿತ್ರ)
ಅಹಮದಾಬಾದ್: ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡದೇ ಇದ್ದಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನೆ ನೇತೃತ್ವ ವಹಿಸಿರುವ ಹಾರ್ದಿಕ್ ಪಟೇಲ್ ಎಚ್ಚರಿಸಿದ್ದಾರೆ. 
ಹಿಂದುಳಿದ ವರ್ಗದಡಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಹಾರ್ದಿಕ್ ಪಟೇಲ್, ಹಿಂಸಾಚಾರ ನಡೆಯಲು ಪೊಲೀಸರೇ ಕಾರಣವಾಗಿದ್ದು ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
ಪ್ರತಿಭಟನಾ ನಿರತ ಮಹಿಳೆಯರು, ಮಕ್ಕಳ ಮೇಲೆ ಪೊಲೀಸರು ಹಲ್ಲೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಮಾಡುವಂತೆಯೇ ಇಲ್ಲೂ ಹಲ್ಲೆ ಮಾಡಲಾಗುತ್ತಿದೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. ನಾನೇನು ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ.  ಅಹಿಂಸಾ ಮಾರ್ಗದಲ್ಲೇ ಪ್ರತಿಭಟನೆ ಮುಂದುವರೆಸುತ್ತೇವೆ, ಬೇಡಿಎಕ್ ಈಡೇರದೇ ಇದ್ದರೆ ಆಮರಣಾಂತ ಉಪವಾಸ ಕೈಗೊಳ್ಳುತ್ತೇವೆ ಒಬ್ಬ ಪ್ರತಿಭಟನಾ ನಿರತನ ಮೇಲೆ ಹಲ್ಲೆ ನಡೆದರೂ ಪೊಲೀಸರು ಹಾಗೂ ಸರ್ಕಾರವೇ ನೇರ ಕಾರಣವಾಗಲಿದೆ ಎಂದು ಹಾರ್ದಿಕ್ ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com