
ನವದೆಹಲಿ: ಸಲ್ಲೇಖನ ವ್ರತ ಆತ್ಮಹತ್ಯೆಗೆ ಸಮಾನವಾಗಿದ್ದು, ಕಾನೂನು ಬಾಹಿರ ಎಂಬ ರಾಜಸ್ಥಾನ ಹೈಕೋರ್ಟ್ ಆದೇಶದ ವಿರುದ್ಧ ಜೈನ ಸಮುದಾಯ ಮಂಗಳವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಹೈಕೋರ್ಟ್ ಆದೇಶದಲ್ಲಿ ಸಲ್ಲೇಖನ ವ್ರತವನ್ನು ಜೈನ ಧರ್ಮದ ಮೂಲ ತತ್ವದ ಭಾಗವಲ್ಲ ಎಂದಿದೆ. ಆದರೆ, ಜೈನ ಧರ್ಮದ ಮೂಲ ತತ್ವಗಳಲ್ಲಿ ಒಂದಾದ ಪರಿತ್ಯಾಗದ ಆಧಾರದ ಮೇಲೆ ಸಲ್ಲೇಖನ ವ್ರತಾಚಾರಣೆ ರೂಢಿಯಲ್ಲಿದೆ.
ಆ ಹಿನ್ನೆಲೆಯಲ್ಲಿ ತಮ್ಮ ಮೇಲ್ಮನವಿಗೆ ಅವಕಾಶ ನೀಡಿ, ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕು ಎಂದು ಜೈನ ಸಮುದಾಯ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದೆ. ಹೈಕೋರ್ಟ್‍ನ ಕಳೆದ ವಾರದ ಆದೇಶ ದೇಶಾದ್ಯಂತ ಜೈನ ಸಮುದಾಯದಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು.
Advertisement