
ನವದೆಹಲಿ: ಸಮಾನ ಹುದ್ದೆ, ಸಮಾನ ಪಿಂಚಣಿ ಯೋಜನೆ(ಒಆರ್‍ಒಪಿ) ಜಾರಿಗಾಗಿ ಕಾದಿರುವ ಲಕ್ಷಾಂತರ ನಿವೃತ್ತ ಯೋಧರಿಗೆ ಸದ್ಯದಲ್ಲೇ ಸಿಹಿ ಕಾದಿದೆಯೇ? ಹೌದು ಎನ್ನುತ್ತದೆ ಮೂಲಗಳು.
ಒಆರ್‍ಒಪಿ ವಿಚಾರದಲ್ಲಿ ತೀವ್ರ ಒತ್ತಡಕ್ಕೆ ಸಿಲುಕಿರುವ ಕೇಂದ್ರ ಸರ್ಕಾರ ಆ.28 ರಂದು ಯೋಜನೆ ಘೋಷಿಸುವ ಸಾಧ್ಯತೆಯಿದೆ. ಪಾಕಿಸ್ತಾನದೊಂದಿಗಿನ 1965 ರ ಯುದ್ಧದ 50ನೇ ವರ್ಷಾಚರಣೆ ಯಂದೇ ಒಆರ್‍ಒಪಿ ಜಾರಿಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯೋಜನೆ ಜಾರಿಗೆ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಯುದ್ಧದ ಸುವರ್ಣಮಹೋತ್ಸವ ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಪ್ರತಿಭಟನಾಕಾರ ಸೇನಾನಿಗಳು ಘೋಷಿಸಿದ್ದರು.
ಮತ್ತೊಬ್ಬ ಸೇನಾನಿ ಆಸ್ಪತ್ರೆಗೆ ದಾಖಲು: ಒಆರ್‍ಒಪಿ ಜಾರಿಗೆ ಒತ್ತಾಯಿಸಿ ಆಮರಣ ನಿರಶನ ನಡೆಸಿ, ಅಸ್ವಸ್ಥರಾದ ಕರ್ನಲ್ ಪುಷ್ಪೇಂದರ್ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಂಗಳವಾರ ತಿಳಿಸಿದ್ದಾರೆ.
ಬೆಳಗ್ಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ-ಯಲ್ಲಿ ಅವರನ್ನು ನವದೆಹಲಿಯ ಆರ್ಮಿ ರಿಸರ್ಚ್ ಆ್ಯಂಡ್ ರೆಫರಲ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಏತ-ನ್ಮಧ್ಯೆ, ಉಪವಾಸ ನಡೆಸುತ್ತಿದ್ದ ಮತ್ತೊಬ್ಬ ನಿವೃತ್ತ ಯೋಧ ಹವಾಲ್ದಾರ್ ಅಶೋಕ್ ಚೌಹಾಣ್ ಆರೋಗ್ಯ ಕೂಡ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದಕ್ಕೂ ಮೊದಲು ಆಸ್ಪತ್ರೆಗೆ ಸೇರಲು ನಿರಾಕರಿಸಿದ್ದ ಅವರು, ``ಸರ್ಕಾರ ಒಆರ್‍ಒಪಿ ಜಾರಿ ಘೋಷಣೆ ಮಾಡುವವರೆಗೂ ನಾನು ಆಸ್ಪತ್ರೆಗೆ ದಾಖಲಾಗುವುದಿಲ್ಲ ಮತ್ತು ಉಪವಾಸ ಕೊನೆಗೊಳಿಸುವುದಿಲ್ಲ'' ಎಂದು ಪಟ್ಟು ಹಿಡಿದಿದ್ದರು. ಇದೇ ವೇಳೆ, ಮೇಜರ್ ಪಿಯರ್‍ಚಂದ್ ಮತ್ತು ನಾಯï್ಕ ಉದಯï ಸಿಂಗ್ ರಾವತ್ ಅವರು ದೆಹಲಿಯ ಜಂತರ್‍ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.
ಯೋಜನೆಯಿಂದ ಎಷ್ಟು ಮಂದಿಗೆ ಅನುಕೂಲ?
22,00,000ಈ ನಡುವೆ, ಭೂಸೇನಾ ಮುಖ್ಯಸ್ಥ ಜ.ದಲ್ಬೀರ್‍ಸಿಂಗ್ ಸುಹಾಗ್ ಅವರು ಮಂಗಳವಾರ ಸಂಜೆ ರಕ್ಷಣಾ ಸಚಿವ ಪರ್ರಿಕರ್‍ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಅವರು ಪ್ರತಿಭಟ ನಾಕಾರ ಸೈನಾನಿಗಳನ್ನೂ ಭೇಟಿಯಾಗಿ ಚರ್ಚಿಸಿದರು.
ಇದೇ ವೇಳೆ, ಮಂಗಳವಾರ ಸರ್ಕಾರ ಮತ್ತು ಮಾಜಿ ಸೈನಿಕರ ನಡುವೆ ನಡೆದ ಮಾತುಕತೆ ವಿಫಲವಾಗಿದೆ. ಸರ್ಕಾರವು 2014ರ ಬದಲಿಗೆ 2015ರಿಂದ ಅನ್ವಯವಾಗುವಂತೆ ಒಆರ್‍ಒಪಿ ಜಾರಿ ಮಾಡುವುದಾಗಿ ಹೇಳಿದೆ. ಆದರೆ, ಮಾಜಿ ಯೋಧರು ಇದಕ್ಕೆ ಒಪ್ಪದ ಕಾರಣ ಸಂಧಾನ ಮಾತುಕತೆ ವಿಫಲ ವಾಯಿತು ಎಂದು ಎನ್‍ಡಿಟಿವಿ ವರದಿ ಮಾಡಿದೆ.
Advertisement