ಇಟಲಿ ನಾವಿಕರ ವಿರುದ್ಧದ ವಿಚಾರಣೆ 2016 ರ ಜನವರಿಗೆ ಮುಂದೂಡಿಕೆ

ಎನ್ ಐ ಎ ತನಿಖೆಯನ್ನು ಪ್ರಶ್ನಿಸಿ ಭಾರತೀಯ ಮೀನುಗಾರರನ್ನು ಹತ್ಯೆ ಮಾಡಿದ್ದ ಇಟಲಿ ನಾವಿಕರ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 2016 ರ ಜನವರಿ 13 ಕ್ಕೆ ಮುಂದೂಡಿದೆ.
ಇಟಲಿ ನಾವಿಕರು
ಇಟಲಿ ನಾವಿಕರು

ನವದೆಹಲಿ: ಎನ್ ಐ ಎ ತನಿಖೆಯನ್ನು ಪ್ರಶ್ನಿಸಿ ಭಾರತೀಯ ಮೀನುಗಾರರನ್ನು ಹತ್ಯೆ ಮಾಡಿದ್ದ ಇಟಲಿ ನಾವಿಕರ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 2016 ರ ಜನವರಿ 13 ಕ್ಕೆ ಮುಂದೂಡಿದೆ.

2012 ರಲ್ಲಿ  ಇಬ್ಬರು ಭಾರತೀಯ ಮೀನುಗಾರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟಲಿ ನಾವಿಕರ ವಿರುದ್ಧದ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ವಿಶ್ವಸಂಸ್ಥೆಯ ಪ್ರಾದೇಶಿಕ ನ್ಯಾಯಮಂಡಳಿ ಭಾರತ ಹಾಗೂ ಇಟಲಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ.  

ಪ್ರಕರಣಕ್ಕೆ ಸಂಬಂಧಿಸಿದಂತೆ  ಇಟಲಿ ಸರ್ಕಾರ ಸಲ್ಲಿಸಿರುವ ಹೇಳಿಕೆ ಸಮರ್ಪಕವಾಗಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಕೋರ್ಟ್, ಮುಂದಿನ ತೀರ್ಮಾನದವರೆಗೂ ಎರಡು ರಾಷ್ಟ್ರಗಳು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳನ್ನು ಸ್ಥಗಿತಗೊಳಿಸಬೇಕು ಎಂದು ಸೂಚಿಸಿತ್ತು. ಇಟಲಿ ನಾವಿಕರ ಪರ ಹಿರಿಯ ವಕೀಲ ಸೋಲಿ ಸೊರಾಬ್ಜಿ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್ ನರಸಿಂಹ, ಪ್ರಕರಣದ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದು ಅನಿಲ್ ಆರ್ ದೇವ್ ವಿಚಾರಣೆಯನ್ನು ಮುಂದಿನ ವರ್ಷ ಜನವರಿ 13 ಕ್ಕೆ ಮುಂದೂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com