ಜಿಸ್ಯಾಟ್-6 ಸಂವಹನ ಉಪಗ್ರಹ ಯಶಸ್ವಿ ಉಡಾವಣೆ

ಭಾರತದ ನೂತನ ಸಂವಹನ ಜಿಸ್ಯಾಟ್‌-6 ಉಪಗ್ರಹವನ್ನು ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ...
ಜಿಸ್ಯಾಟ್-6
ಜಿಸ್ಯಾಟ್-6
ನವದೆಹಲಿ: ಭಾರತದ ನೂತನ ಸಂವಹನ ಜಿಸ್ಯಾಟ್‌-6 ಉಪಗ್ರಹವನ್ನು ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. 
‘ಜಿಎಸ್‌ಎಲ್‌ವಿ (ಭೂಸ್ಥಿರ ಉಪಗ್ರಹ ಉಡಾವಣಾ ವಾಹನ) ಜಿಸ್ಯಾಟ್-6 ಕೃತಕ ಉಪಗ್ರಹವನ್ನು ಹೊತ್ತು ಗುರುವಾರ ಸಂಜೆ 4.52ಕ್ಕೆ ನಭಕ್ಕೆ ಹಾರಿತು. ರಾಕೆಟ್ ನಿಂದ ಜಿಸ್ಯಾಟ್-6 ಉಪಗ್ರಹ ರಾಕೆಟ್ ನಿಂದ ಯಶಸ್ವಿಯಾಗಿ ಬೇರ್ಪಟಿದ್ದು, ಹಾಸನದ ನಿಯಂತ್ರಣ ಕೊಠಡಿಗೆ ಸಿಗ್ನಲ್ ಗಳು ಲಭ್ಯವಾಗುತ್ತಿದೆ. 
ಜಿಸ್ಯಾಟ್‌-6 ಉಪಗ್ರಹದ ತೂಕ 2,117 ಕೆ.ಜಿ. ಮತ್ತು ಇಂಧನದ ತೂಕ 1132 ಕೆ.ಜಿ.ಯಾಗಿದೆ. ಈ ಉಪಗ್ರಹದ ಅವಧಿ 9 ವರ್ಷ. ಇಸ್ರೋ ನಿರ್ಮಿಸಿದ ಭಾರತದ 25ನೇ ಸಂವಹನ ಉಪಗ್ರಹವಾಗಿದೆ. ಅಲ್ಲದೆ, ಜಿಸ್ಯಾಟ್‌ ಸರಣಿಯಲ್ಲಿ 12ನೇಯದ್ದಾಗಿದೆ. ಸೇನೆಗೆ ಸಂಬಂಧಿಸಿದ ಕಾರ್ಯಾಚರಣೆ ಮತ್ತು ಸಂವಹನಕ್ಕೆ ಉಪಗ್ರಹ ನೆರವು ನೀಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com