ಸಮಾನ ಶ್ರೇಣಿ, ಸಮಾನ ಪಿಂಚಣಿ ಜಾರಿಗೆ ಸೋನಿಯಾ ಗಾಂಧಿ ಒತ್ತಾಯ

ಮಾಜಿ ಸೈನಿಕರ ಬೇಡಿಕೆಯಾದ ಸಮಾನ ಶ್ರೇಣಿ, ಸಮಾನ ಪಿಂಚಣಿಯನ್ನು ಘೋಷಿಸುವುದು ಮತ್ತು 1965ರ ಭಾರತ-ಪಾಕ್ ಯುದ್ಧದಲ್ಲಿ...
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(ಸಂಗ್ರಹ ಚಿತ್ರ)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(ಸಂಗ್ರಹ ಚಿತ್ರ)

ನವದೆಹಲಿ : ಮಾಜಿ ಸೈನಿಕರ ಬೇಡಿಕೆಯಾದ ಸಮಾನ ಶ್ರೇಣಿ, ಸಮಾನ ಪಿಂಚಣಿಯನ್ನು ಘೋಷಿಸುವುದು ಮತ್ತು 1965ರ ಭಾರತ-ಪಾಕ್ ಯುದ್ಧದಲ್ಲಿ ಹೋರಾಡಿದ ಮತ್ತು ಮೃತಪಟ್ಟ ಸೈನಿಕರಿಗೆ ನೀಡುವ ನಿಜವಾದ ಗೌರವ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಅವರು ಇಂದು 1965ರ ಭಾರತ-ಪಾಕ್ ಯುದ್ಧದಲ್ಲಿ ತ್ಯಾಗ ಮಾಡಿದ ಸೈನಿಕರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದರು.

ಯುದ್ಧದಲ್ಲಿ ಭಾಗವಹಿಸಿದ ಮತ್ತು ಮಡಿದ ಯೋಧರಿಗೆ ನನ್ನ ನಮನಗಳು. ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ರಕ್ಷಣಾ ಸಚಿವ ವೈ.ಬಿ.ಚವಾಣ್ ಅವರ ಧೈರ್ಯ, ದಿಟ್ಟ ಕ್ರಮದಿಂದಾಗಿ ಪಾಕಿಸ್ತಾನದ ಸೈನಿಕರನ್ನು ಸದೆಬಡಿಯಲಾಯಿತು. ಭಾರತದ ಇತಿಹಾಸದಲ್ಲಿ ಇದು ಒಂದು ಅಳಿಸಲಾಗದ ಘಟನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com