ಮಹಾರಾಷ್ಟ್ರ ನಾಸಿಕ್ ಕುಂಭಮೇಳದಲ್ಲಿ ಮಿಂದೆದ್ದ ಭಕ್ತಸಾಗರ

ಮಹಾರಾಷ್ಟ್ರದ ನಾಸಿಕ್ ಮತ್ತು ತ್ರಯಂಬಕೇಶ್ವರದಲ್ಲಿ ನಡೆಯುವ ನಾಸಿಕ್ ಕುಂಭಮೇಳಕ್ಕೆ ಶನಿವಾರ ಚಾಲನೆ ದೊರೆತಿದ್ದು, ಲಕ್ಷಾಂತರ ಭಕ್ತರು, ಸಾಧು-ಸಂತರು ನದಿಯಲ್ಲಿ ಮಿಂದು ಪುಣ್ಯಸ್ನಾನ ಮಾಡಿದ್ದಾರೆ...
ಮಹಾರಾಷ್ಟ್ರ ನಾಸಿಕ್ ಕುಂಭಮೇಳದಲ್ಲಿ ಮಿಂದೆದ್ದ ಭಕ್ತಸಾಗರ (ಸಾಂದರ್ಭಿಕ  ಚಿತ್ರ)
ಮಹಾರಾಷ್ಟ್ರ ನಾಸಿಕ್ ಕುಂಭಮೇಳದಲ್ಲಿ ಮಿಂದೆದ್ದ ಭಕ್ತಸಾಗರ (ಸಾಂದರ್ಭಿಕ ಚಿತ್ರ)

ನಾಸಿಕ್: ಮಹಾರಾಷ್ಟ್ರದ ನಾಸಿಕ್ ಮತ್ತು ತ್ರಯಂಬಕೇಶ್ವರದಲ್ಲಿ ನಡೆಯುವ ನಾಸಿಕ್ ಕುಂಭಮೇಳಕ್ಕೆ ಶನಿವಾರ ಚಾಲನೆ ದೊರೆತಿದ್ದು, ಲಕ್ಷಾಂತರ ಭಕ್ತರು, ಸಾಧು-ಸಂತರು ನದಿಯಲ್ಲಿ ಮಿಂದು ಪುಣ್ಯಸ್ನಾನ ಮಾಡಿದ್ದಾರೆ.

ಆಂಧ್ರಪ್ರದೇಶದಲ್ಲಿ ನಡೆದ ಗೋದಾವರಿ ದುರ್ಘಟನೆಯು ಹಲವು ರಾಜ್ಯಗಳಿಗೆ ಪಾಠ ಕಲಿಯುವಂತೆ ಮಾಡಿದ್ದು, ಗೋದಾವರಿಯಲ್ಲಾದ ದುರ್ಘಟನೆ ಮಹಾರಾಷ್ಟ್ರ ಕುಂಭಮೇಳದಲ್ಲಿ ನಡೆಯದಂತೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳೀಯ ಅಧಿಕಾರಿಗಳು 2 ದಿನಗಳ ಮುಂಚಿತವಾಗಿಯೇ ಮುಂಜಾಗ್ರತಾ ಕ್ರಮ ಕೈಗೊಂಡು ಸ್ಥಳದಲ್ಲಿ ಬಿಗಿ ಪೋಲೀಸ್ ಬಂದೋಬಸ್ ಹಾಗೂ ಭಕ್ತರಿಗೆ ಸುರಕ್ಷೆಯಿಂದ ಸಾಗಲು ಸೂಕ್ತ ವ್ಯವಸ್ಥೆಯನ್ನು ರೂಪಿಸಿದ್ದಾರೆ.

ಭಕ್ತಾದಿಗಳ ಅನುಕೂಲಕ್ಕಾಗಿ ಕ್ರಮ ಕೊಂಡಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 3000ಕ್ಕೂ ಹೆಚ್ಚು ಬಸ್ ವ್ಯವಸ್ಥೆಯನ್ನು ರೂಪಿಸಿದ್ದು, ಸಂಚಾರವು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com