ಒಆರ್ ಒಪಿ ಪ್ರತಿಭಟನೆ: ಅಸ್ವಸ್ಥಗೊಂಡ ನಿವೃತ್ತ ಸೈನಿಕರ ಸಂಖ್ಯೆ 5 ಕ್ಕೆ ಏರಿಕೆ
ನವದೆಹಲಿ: ಒನ್ ರ್ಯಾಂಕ್ ಒನ್ ಪೆನ್ಷನ್ ಗಾಗಿ ಆಗ್ರಹಿಸಿ ಆಮರಣಾಂತ ಉಪವಾಸ ಕೈಗೊಂಡಿದ್ದ ನಿವೃತ್ತ ಯೋಧರೊಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಈ ವರೆಗೂ 5 ನಿವೃತ್ತ ಯೋಧರು ಅಸ್ವಸ್ಥಗೊಂಡಿದ್ದಾರೆ.
ಆಮರಣಾಂತ ಉಪವಾಸ ಕೈಗೊಂಡಿರುವ ಯೋಧರ ಪೈಕಿ ಈ ವರೆಗೂ ನಾಲ್ಕು ನಿವೃತ್ತ ಸೈನಿಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಆರ್ ಒಪಿಗಾಗಿ ಆಗ್ರಹಿಸುತ್ತಿರುವ ಸೈನಿಕರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಯೋಜನೆ ಜಾರಿಗೆ ಇನ್ನಷ್ಟು ಸಮಯ ಬೇಕಾಗುತ್ತದೆ. ಒಆರ್ ಒಪಿ ಜಾರಿಗೆ ಎದುರಾಗಿರುವ ಅಡ್ಡಿಗಳನ್ನು ಸರಿಪಡಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಒಆರ್ ಒಪಿ ಯೋಜನೆ ಜಾರಿಗೆ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಯೋಜನೆ ಜಾರಿಯಾಗಲಿದೆ ಎಂದು ರಕ್ಷಣಾ ಸಚಿವರು ಭರವಸೆ ನೀಡಿದ್ದರು. ಇದಾದ ಬಳಿಕ ನಿವೃತ್ತ ಸೈನಿಕರ ನಿಯೋಗ, ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಶೀಘ್ರವೇ ಯೋಜನೆ ಜಾರಿ ಮಾಡುವುದಕ್ಕೆ ಒತ್ತಾಯಿಸಿದ್ದರು. ಆದರೆ ಈ ವರೆಗೂ ಯೋಜನೆ ಜಾರಿಯಾಗದೆ ಇರುವುದರ ಹಿನ್ನೆಲೆಯಲ್ಲಿ ಯೋಧರು ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ