ಸೂಫಿ ತತ್ವ ನಿಜವಾದ ಇಸ್ಲಾಂ ಬಗ್ಗೆ ತಿಳಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೂಫಿ ಪಂಥದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದ, ಜಗತ್ತು ಇಸ್ಲಾಂ ನ ನಿಜವಾದ ಚಿತ್ರಣವನ್ನು ಅರಿಯಬೇಕಿದೆ ಎಂದಿದ್ದಾರೆ.
ಸೂಫಿ ಸಂತರ ನಿಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಸೂಫಿ ಸಂತರ ನಿಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)

ನವದೆಹಲಿ: ಸೂಫಿ ಪಂಥದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ , ಜಗತ್ತು ಇಸ್ಲಾಂ ನ ನಿಜವಾದ ಚಿತ್ರಣವನ್ನು ಅರಿಯಬೇಕಿದೆ ಎಂದಿದ್ದಾರೆ.

ಆ.30 ರಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಸೂಫಿ ಸಂಸ್ಕೃತಿಯನ್ನು ಎಲ್ಲಾ ಧರ್ಮಗಳ ಜನರೂ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು  ಮೋದಿ ಹೇಳಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸೂಫಿ ಸಂತರನ್ನು ಭೇಟಿ ಮಾಡುವ ಅವಕಾಶ ಒದಗಿಬಂದಿತ್ತು, ಅವರೊಂದಿಗಿನ ಮಾತುಕತೆ ಅವರು ಮಾತನಾಡುವ ಶೈಲಿ ಎಲ್ಲವೂ ಕಿವಿಗೆ ಸಂಗೀತ ಕೇಳಿದಂತಿತ್ತು ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಜವಾದ ಇಸ್ಲಾಂ ಬಗ್ಗೆ ಜಗತ್ತು ಅರಿಯಬೇಕಾದ ತುರ್ತು ಅಗತ್ಯವಿದೆ. ಸೂಫಿ ಸಂಸ್ಕೃತಿ ಉದಾರತೆ ಮತ್ತು ಪ್ರೀತಿಯನ್ನು ಹೊಂದಿರುವ ಸಂಸ್ಕೃತಿಯಾಗಿದೆ. ನಾವು ಯಾವುದೇ ಧರ್ಮದವರಾಗಿದ್ದರೂ ಸೂಫಿ ಪಂಥವನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಮೋದಿ ಹೇಳಿದ್ದಾರೆ.
ಗುರುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ 40 ಸೂಫಿ ಸಂತರ ನಿಯೋಗ, ಸೂಫಿ ಸಂಸ್ಕೃತಿ ಭಾರತೀಯ ತತ್ವಗಳ ಅವಿಭಾಜ್ಯ ಅಂಗ. ಆದರೆ ತೀವ್ರವಾದಿಗಳ ಪಡೆ ಸೂಫಿ ಸಂಸ್ಕೃತಿಯನ್ನು ಬಲಹೀನಗೊಳಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದರು. ಸೂಫಿ ಸಂಸ್ಕೃತಿಯನ್ನು ಬಲಹೀನಗೊಳಿಸಲು ಯತ್ನಿಸುತ್ತಿರುವ ಪಡೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ತಕ್ಕ ಉತ್ತರ ನೀಡಲು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com