
ನವದೆಹಲಿ: ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆ ಅಡಿಯಲ್ಲಿ ಪಿಂಚಣಿಯ ವಾರ್ಷಿಕ ಪರಿಷ್ಕರಣೆ ಮಾಡುವ ಸಾಧ್ಯತೆಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಳ್ಳಿಹಾಕಿದ್ದಾರೆ.
ಕೇಂದ್ರ ಸರ್ಕಾರ ಯೋಧರ ಹಿತರಕ್ಷಣೆಗೆ ಬದ್ಧವಾಗಿದೆ. ನಿವೃತ್ತ ಸೈನಿಕರ ಪಿಂಚಣಿಯನ್ನು ವಾರ್ಷಿಕವಾಗಿ ಪರಿಷ್ಕರಣೆ ಮಾಡುವ ಉದಾಹರಣೆಗಲಿಲ್ಲ. ಒಆರ್ ಒಪಿ ಜಾರಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ, ಸಮಂಜಸವಾದ ಮಾನದಂಡಗಳಲ್ಲಿ ಒನ್ ರ್ಯಾಂಕ್ ಒನ್ ಪೆನ್ಷನ್ ನನ್ನು ಜಾರಿಗೊಳಿಸಬೇಕು, ಪ್ರತಿ ವರ್ಷ ಪರಿಷ್ಕರಣೆಯಾಗುವ ಒಆರ್ ಒಪಿಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ.
7 ನೇ ವೇತನ ಆಯೋಗದ ಶಿಫಾರಸುಗಳು ಶ್ರೀಘ್ರವೇ ಪ್ರಕಟವಾಗಲಿದ್ದು ಒಆರ್ ಒಪಿಯನ್ನು ವಾರ್ಷಿಕ ಪರಿಷ್ಕರಣೆ ಮಾಡುವ ನಿವೃತ್ತ ಯೋಧರ ಬೇಡಿಕೆಯನ್ನು ಅರುಣ್ ಜೇಟ್ಲಿ ತಿರಸ್ಕರಿಸಿದ್ದಾರೆ. ಒಆರ್ ಒಪಿ ಜಾರಿಗೆ ಆಗ್ರಹಿಸಿ ಕಳೆದ ಎರಡು ತಿಂಗಳಿಂದ ನಿವೃತ್ತ ಸೈನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಶೀಘ್ರವೇ ಯೋಜನೆ ಜಾರಿ ಮಾಡುವುದರೊಂದಿಗೆ ವಾರ್ಷಿಕವಾಗಿ ಪಿಂಚಣಿಯನ್ನು ಪರಿಷ್ಕರಣೆ ಮಾಡಬೇಕೆಂದೂ ನಿವೃತ್ತ ಯೋಧರು ಆಗ್ರಹಿಸಿದ್ದಾರೆ.
Advertisement