
ನವದೆಹಲಿ: ಜೈನರ ಸಲ್ಲೇಖನ ವ್ರತ ಆತ್ಮಹತ್ಯೆಗೆ ಸಮಾನವಾಗಿದ್ದು, ಕಾನೂನು ಬಾಹಿರ ಎಂದು ರಾಜಸ್ಥಾನ ಹೈಕೋರ್ಟ್ ನೀಡಿದ್ದ ತೀರ್ಪುಗೆ ಸೋಮವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ರಾಜಸ್ಥಾನ ಹೈಕೋರ್ಟ್ ಆದೇಶದ ವಿರುದ್ಧ ಜೈನ ಸಮುದಾಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ, ವಿಚಾರಣೆ ಮುಕ್ತಾಯವಾಗುವವರೆಗೆ ಸಲ್ಲೇಖನ ವೃತ ಆಚರಣೆಗೆ ಅನುಮತಿ ನೀಡಿದೆ.
ಜೈನ ಧರ್ಮದ ಆಚರಣೆಯ ಪ್ರಮುಖ ಅಂಗವಾದ ಸಲ್ಲೇಖನ ವೃತ ಆತ್ಮಹತ್ಯೆಗೆ ಸಮಾನ. ಈ ಆಚರಣೆ ಭಾರತೀಯ ದಂಡ ಸಂಹಿತೆ 306(ಆತ್ಮಹತ್ಯೆಗೆ ಪ್ರೇರಣೆ) ಮತ್ತು 309ರ (ಆತ್ಮಹತ್ಯೆಗೆ ಯತ್ನ) ಅನ್ವಯ ಶಿಕ್ಷಾರ್ಹ ಎಂದು ಕಳೆದ ತಿಂಗಳು ರಾಜಸ್ಥಾನ ಹೈಕೋರ್ಟ್ ಆದೇಶದೊಂದಿಗೆ ತಡೆಯಾಜ್ಞೆ ನೀಡಿತ್ತು.
ಏನಿದು ಸಲ್ಲೇಖನ ವ್ರತ?
ಜೈನ ಧರ್ಮವನ್ನು ಸ್ವೀಕರಿಸಿದ ವ್ಯಕ್ತಿ ತನ್ನ ಸ್ವಇಚ್ಛೆಯಿಂದ ಮತ್ತು ಕ್ರಮಬದ್ಧ ಉಪವಾಸದಿಂದ ಸಾವನ್ನಪ್ಪುವುದು. ಆಮರಣ ಉಪವಾಸ ಮಾಡಿ ಇಹಲೋಕ ತ್ಯಜಿಸುವುದೇ ಸಲ್ಲೇಖನ ವ್ರತ. ಮೋಕ್ಷ ಸಾಧಿಸಲು ಇದು ಪರಮೋತ್ಛ ಮಾರ್ಗ ಎಂಬುದಾಗಿ ಜೈನ ಧರ್ಮ ಗ್ರಂಥದಲ್ಲಿ ಬರೆದಿಡಲಾಗಿದೆ. ತನ್ನ ಜೀವನದ ಉದ್ದೇಶ ಪೂರ್ಣಗೊಂಡಿದೆ ಎಂದು ಮನವರಿಕೆಯಾದ ವ್ಯಕ್ತಿ ಸಲ್ಲೇಖ ವ್ರತ ಸ್ವೀಕರಿಸುವ ಪ್ರತಿಜ್ಞೆ ಮಾಡಬಹುದು. ಹಳೆಯ ಕರ್ಮದ ಫಲಗಳಿಂದ ದೇಹವನ್ನು ಶುದ್ಧೀಕರಿಸುವುದು ಮತ್ತು ಹೊಸದಾದ ಕರ್ಮ ಪಾಶದಲ್ಲಿ ಸಿಲುಕಿಕೊಳ್ಳದೇ ಇರುವುದು ವ್ರತಾಚರಣೆಯ ಉದ್ದೇಶ.
Advertisement