ಇಂದ್ರಾಣಿ ಜತೆ ಅಫೇರ್ ಇತ್ತು, ಆದರೆ ಮದುವೆಯಾಗಿಲ್ಲ: ಗುವಾಹತಿ ವಕೀಲ

ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಜತೆ ಕಾಮಕ್ಯ ದೇವಸ್ಥಾನದಲ್ಲಿ ಗೌಪ್ಯವಾಗಿ ಮದುವೆಯಾಗಿರುವ ವಿಚಾರವನ್ನು ಗುವಾಹತಿ...
ಶೀನಾ ಬೋರಾ ಮತ್ತು ಇಂದ್ರಾಣಿ ಮುಖರ್ಜಿ
ಶೀನಾ ಬೋರಾ ಮತ್ತು ಇಂದ್ರಾಣಿ ಮುಖರ್ಜಿ
Updated on

ಗುವಾಹತಿ: ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಇಂದ್ರಾಣಿ ಮುಖರ್ಜಿ ಜತೆ ಕಾಮಕ್ಯ ದೇವಸ್ಥಾನದಲ್ಲಿ ಗೌಪ್ಯವಾಗಿ ಮದುವೆಯಾಗಿರುವ ವಿಚಾರವನ್ನು ಗುವಾಹತಿ ವಕೀಲ ಬಿಷ್ಣು ಪ್ರಸಾದ್ ಚೌಧರಿ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಆದರೆ ಆಕೆಯೊಂದಿಗೆ ಸಂಬಂಧ ಇದ್ದಿದ್ದು ನಿಜ ಎಂದು ಹೇಳಿದ್ದಾರೆ.

'ಹೌದು, ಇಂದ್ರಾಣಿಯೊಂದಿಗೆ ಆಫೇರ್ ಇತ್ತು. ನಾನು ಎಲ್‌ಎಲ್‌ಬಿ ಮಾಡುತ್ತಿದ್ದ ವೇಳೆ ಅವಳು ಕಾಟನ್ ಕಾಲೇಜ್‌ನಲ್ಲಿ ಓದುತ್ತಿದ್ದಳು. ಈ ವೇಳೆ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು. ಉನ್ನತ ಶಿಕ್ಷಣಕ್ಕಾಗಿ ಅವಳು ಶಿಲಾಂಗ್‌ಗೆ ತೆರಳಿದ ನಂತರ, 3-4 ತಿಂಗಳಲ್ಲೇ ಸಂಬಂಧ ಕಡಿದುಕೊಂಡೆ' ಎಂದು 55 ವರ್ಷದ ವಕೀಲ ಚೌಧರಿ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಆದರೆ ಚೌಧರಿಯ ಕೆಲವು ಸ್ನೇಹಿತರು, ಇಂದ್ರಾಣಿಯನ್ನು ಗೌಪ್ಯವಾಗಿ ಮದುವೆಯಾಗಿದ್ದಾರೆ ಎಂದು ಭಾವಿಸಿದ್ದರು. ಅಲ್ಲದೆ ಚೌಧರಿ ಇಂದ್ರಾಣಿಯೊಂದಿಗೆ ಮದುವೆಯಾಗಿದ್ದು,  ಗುವಾಹತಿಯ ಕ್ಲಬ್‌ನಲ್ಲಿ ವಾಸವಾಗಿದ್ದರು. ಮದುವೆಯಾದ ಆರೇ ತಿಂಗಳಲ್ಲೇ ಅವರ ಮದುವೆ ಮುರಿದು ಬಿದ್ದಿತು ಎಂದು ಸಂಬಂಧಿಗಳು ಹೇಳಿದ್ದಾರೆ. ಆದರೆ ಮದುವೆ ಮುರಿಯಲು ಕಾರಣ ಮಾತ್ರಿ ತಿಳಿಸಿಲ್ಲ.

'ಅವಳು ತುಂಬಾ ಜಾಣೆ ಮತ್ತು ಚೆನ್ನಾಗಿದ್ದಳು, ಅಲ್ಲದೆ ದೊಡ್ಡ ಗುರಿ ಹೊಂದಿದ್ದಳು. ಓದಿನಲ್ಲೂ ಅವಳು ತುಂಬಾ ಮುಂದಿದ್ದಳು. ಅವಳ ಮನೆಗೆ ನಾನು ಹೋಗುತ್ತಿದ್ದೆ, ನನ್ನ ಮನೆಗೆ ಅವಳು ಬರುತ್ತಿದ್ದಳು. ಇಂದ್ರಾಣಿ ಸಿದ್ಧಾರ್ಥ್ ದಾಸ್‌ರೊಂದಿಗೆ ಸಂಬಂಧ ಬೆಳೆಸುವವರೆಗೂ ನಾನು ಅವಳನ್ನು ಲವ್ ಮಾಡುತ್ತಿದ್ದೆ. ದಾಸ್‌ರೊಂದಿಗಿನ ಅವಳ ಅಫೇರ್‌ನಿಂದ ನನಗೆ ತುಂಬಾ ನೋವಾಗಿತ್ತು' ಎಂದು ಚೌಧರಿ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com