ಮುಸಲ್ಮಾನರ ವಿರುದ್ಧ ತಾರತಮ್ಯ ಸರಿಪಡಿಸಿ: ಅನ್ಸಾರಿ

ಗುರುತಿಸಿಕೊಳ್ಳುವಿಕೆ, ರಕ್ಷಣೆ, ಶಿಕ್ಷಣ, ಉದ್ಧಾರ ಮತ್ತು ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ಭಾರತೀಯ ಮುಸಲ್ಮಾನರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ...
ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ(ಸಂಗ್ರಹ ಚಿತ್ರ)
ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ(ಸಂಗ್ರಹ ಚಿತ್ರ)

ನವದೆಹಲಿ:ಗುರುತಿಸಿಕೊಳ್ಳುವಿಕೆ, ರಕ್ಷಣೆ, ಶಿಕ್ಷಣ, ಉದ್ಧಾರ ಮತ್ತು ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ಭಾರತೀಯ ಮುಸಲ್ಮಾನರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿದ್ದಾರೆ.

ಮುಸಲ್ಮಾನರು ಎದುರಿಸುತ್ತಿರುವ ಬಹಿಷ್ಕಾರದ ಮತ್ತು ತಾರತಮ್ಯ ಸಮಸ್ಯೆಗಳನ್ನು ಕೂಡ ಸರ್ಕಾರಗಳು ಸರಿಪಡಿಸಬೇಕಾಗಿದೆ ಎಂದು ಅವರು ನಿನ್ನೆ ಅಖಿಲ ಭಾರತ ಮಜ್ ಲೋಯಿಸ್-ಇ-ಮುಶಾವರತ್ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಹೇಳಿದರು.

ಕೇಂದ್ರ ಸರ್ಕಾರದ ''ಸಬ್ ಕ ಸಾತ್, ಸಬ್ ಕ ವಿಕಾಸ್''ನ ಉದ್ದೇಶವನ್ನು ಉಲ್ಲೇಖಿಸಿದ ಅವರು, ಸಮಾಜದ ಎಲ್ಲಾ ವರ್ಗಗಳ ಜನರು ಒಟ್ಟಿಗೆ ಅಭಿವೃದ್ಧಿ ಹೊಂದಿದರೆ ಮಾತ್ರ ಈ ವಾಕ್ಯಕ್ಕೆ ಅರ್ಥ ಸಿಗುತ್ತದೆ ಎಂದು ಹೇಳಿದರು.

ಸ್ವಾತಂತ್ರ್ಯ ಗಳಿಸಿದ ನಂತರ ಮುಸಲ್ಮಾನ ಗುಂಪಿನ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿದೆ. ಶಿಕ್ಷಣ, ರಕ್ಷಣೆ ಇವುಗಳೆಲ್ಲ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳು.
ಇವುಗಳನ್ನು ಈಡೇರಿಸದಿದ್ದರೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಗೆ ಅರ್ಥ ಸಿಗುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com