
ಮುಂಬೈ: ಬಾಲಿವುಡ್ ಸಿನಿಮಾವನ್ನೇ ಮೀರಿಸುವ ಥ್ರಿಲ್ಲರ್‍ನಂತೆ ಸಾಗುತ್ತಿರುವ ಶೀನಾ ಹತ್ಯೆ ಪ್ರಕರಣ ಹೊಸ ತಿರುವು ಪಡೆದಿದ್ದು, ಶೀನಾಳನ್ನು ಮುಗಿಸುವುದಕ್ಕೆ ಮುಂಚೆಯೀ ಮಗ ಮಿಖಾಯಿಲ್‍ನನ್ನೂ ಮುಗಿಸಲು ಇಂದ್ರಾಣಿ ನಾಲ್ಕು ಬಾರಿ ಯತ್ನಿಸಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ಮಿಖಾಯಿಲ್ ಹತ್ಯೆಗಾಗಿ ಶತಾಯಗತಾಯ ಯತ್ನಿಸಿದ್ದ ಇಂದ್ರಾಣಿ, ಅದಕ್ಕಾಗಿ ಮುಂಬೈನ ಹಿಟ್‍ಮಾ್ಯನ್ ಒಬ್ಬನಿಗೆ ರು.2.5 ಲಕ್ಷ ಸುಪಾರಿ ನೀಡಿದ್ದಳು. ಇದೀಗ ಮುಂಬೈ ಪೊಲೀಸರು ಹಿಟ್‍ಮಾ್ಯನ್‍ನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ಆತ ಈ ಸತ್ಯ ಬಾಯಿಬಿಟ್ಟಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ, ಈ ಹಿಂದಿನ ಮೂರು ಹತ್ಯೆ ಯತ್ನಗಳಂತೆ ಹಿಟ್‍ಮಾ್ಯನ್ ಪ್ರಯೋಗದಿಂದಲೂ ಮಿಖಾಯಿಲ್ ಪಾರಾಗಿದ್ದಾನೆ.
ಈ ಹಿಂದೆ 2 ಬಾರಿ ಗುವಾಹಟಿಯಲ್ಲಿ ತನ್ನ ಕೊಲೆಗೆ ಯತ್ನಿ ಸಿದ್ದ ಇಂದ್ರಾಣಿ, ಶೀನಾ ಕೊಲೆಯಾದ ದಿನ ಕೂಡ ಮುಂಬೈ ಹೊಟೇಲ್‍ಗೆ ತನ್ನನ್ನು ಕರೆಸಿಕೊಂಡು ಹತ್ಯೆಗೆ ಯತ್ನಿಸಿದ್ದಳು ಎಂದು ಮಿಖಾಯಿಲ್ ಶನಿವಾರ ಪೊಲೀಸರಿಗೆ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಇಂದ್ರಾಣಿ, ಆಕೆಯ ಎರಡನೇ ಪತಿ ಸಂಜೀವ್ ಖನ್ನಾ, ಡ್ರೈವರ್ ರಾಯ್ ವಿರುದ್ಧ ಕೊಲೆ ಯತ್ನದ ಹೊಸ ಕೇಸು ದಾಖಲಿಸಿದ್ದಾರೆ.
Advertisement