ಪಾಕ್ ವಿರುದ್ದ ಯುದ್ಧಕ್ಕೆ ಭಾರತ ಸನ್ನದ್ಧವಾಗಿರಬೇಕು: ಸೇನಾ ಮುಖ್ಯಸ್ಥ

ಪಾಕಿಸ್ತಾನ ವಿರುದ್ಧ ಯಾವಾಗ ಬೇಕಾದರೂ ಸಣ್ಣದೊಂದು ಯುದ್ಧ ನಡೆಯಬಹುದು. ಅದಕ್ಕಾಗಿ ಭಾರತದ ಸೇನಾಪಡೆ ಸನ್ನದ್ಧವಾಗಿರಬೇಕಿದೆ...
ಸೇನಾಪಡೆಯ ಮುಖ್ಯಸ್ಥ ದಲ್‌ಬೀರ್ ಸಿಂಗ್
ಸೇನಾಪಡೆಯ ಮುಖ್ಯಸ್ಥ ದಲ್‌ಬೀರ್ ಸಿಂಗ್

ನವದೆಹಲಿ: ಪಾಕಿಸ್ತಾನ ವಿರುದ್ಧ ಯಾವಾಗ ಬೇಕಾದರೂ ಸಣ್ಣದೊಂದು ಯುದ್ಧನಡೆಯಬಹುದು. ಅದಕ್ಕಾಗಿ ಭಾರತದ ಸೇನಾಪಡೆ ಸನ್ನದ್ಧವಾಗಿರಬೇಕಿದೆ ಎಂದು ಸೇನಾಪಡೆಯ ಮುಖ್ಯಸ್ಥ ದಲ್‌ಬೀರ್ ಸಿಂಗ್ ಹೇಳಿದ್ದಾರೆ.

ಪಾಕಿಸ್ತಾನದಿಂದ ಪದೇ ಪದೇ ಕದನ ವಿರಾಮ ಉಲ್ಲಂಘನೆ, ನುಸುಳುವಿಕೆ ನಡೆಯತ್ತಲೇ ಇರುತ್ತದೆ. ಆದ್ದರಿಂದ ಗಡಿಪ್ರದೇಶದಲ್ಲಿ ಸೇನೆ ಹೆಚ್ಚಿನ ಜಾಗರೂಕತೆಯಿಂದಿರಬೇಕು.

ಜಮ್ಮು ಕಾಶ್ಮೀರದಲ್ಲಿ ಸಂಘರ್ಷ ಸೃಷ್ಟಿಸಲು ಪಾಕ್ ಹಲವಾರು ಕುತಂತ್ರಗಳನ್ನು ಮಾಡುತ್ತಿದೆ. ಇದು ಮುಂದೊಮ್ಮೆ ಯುದ್ಧಕ್ಕೆ ಕಾರಣವಾಗಬಹುದು. ಆದ್ದರಿಂದ ಇಂಥಾ ಪರಿಸ್ಥಿತಿಯನ್ನೆದುರಿಸಲು ಇದೀಗ ಸೇನೆ ತಯಾರಾಗಿದೆ.

1965ರಲ್ಲಿ ಪಾಕ್ ವಿರುದ್ಧ ನಡೆದ ಯುದ್ಧದಲ್ಲಿ ಭಾರತೀಯ ಸೇನೆ ತಕ್ಕ ಉತ್ತರ ನೀಡಿತ್ತು. ಯುದ್ಧದ ವೇಳೆ ಭಾರತೀಯ ಸೈನ್ಯಕ್ಕೆ ಭಾರತೀಯರಿಂದ ಉತ್ತಮ ಬೆಂಬಲ ಲಭಿಸಿತ್ತು. ಯುದ್ಧದಲ್ಲಿ ಗೆಲುವು ಸಾಧಿಸಲು ಇದೂ ಕಾರಣವಾಗಿದೆ ಎಂದು ಬಲ್‌ಬೀರ್ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com